-->
ದ ಕ ಜಿಲ್ಲಾ ಚಿತ್ರ ಕಲಾ ಶಿಕ್ಷಕರ ಸಮ್ಮೇಳನದ ಲಾಂಛನ ಹಾಗೂ ಶಿರ್ಷಿಕೆ ಬಿಡುಗಡೆ

ದ ಕ ಜಿಲ್ಲಾ ಚಿತ್ರ ಕಲಾ ಶಿಕ್ಷಕರ ಸಮ್ಮೇಳನದ ಲಾಂಛನ ಹಾಗೂ ಶಿರ್ಷಿಕೆ ಬಿಡುಗಡೆ



*ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭ*
___________________________________________
    ದ.ಕ.ಜಿಲ್ಲಾ  ಚಿತ್ರಕಲಾ ಸಮ್ಮೇಳನ ಸಮಿತಿ ಮಂಗಳೂರು ಇವರ ವತಿಯಿಂದ ನವೆಂಬರ್ ತಿಂಗಳ 09 ತಾರೀಖಿನಂದು ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಒಂದು ದಿನದ ಸಮ್ಮೇಳನ  *"ವರ್ಣ ಯಾನ 2025 "* ಇದರ ಲಾಂಛನ ಹಾಗೂ ಶಿರ್ಷಿಕೆ ಬೆಡುಗಡೆ ಸಮಾರಂಭವು ಸಂತ ಅಲೋಶಿಯಸ್ ಪ್ರೌಢಶಾಲೆ ಯಲ್ಲಿ ನಡೆಯಿತು

 ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆ ಕೊಡಿಯಾಲ್ ಬೈಲು ಇಲ್ಲಿ ವಿವಿಧ ಕಾರ್ಯ ಚಟುವಟಿಕೆಗಳೊಂದಿಗೆ ನಡೆಯಲಿದ್ದು, ಈ ಕಾರ್ಯಕ್ರಮದ ಲಾಂಛನವನ್ನು ಸಂತ ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ.ಫಾ. ಮೆಲ್ವೀನ್ ಪಿಂಟೋ ಎಸ್ ಜೆ ಹಾಗೂ ಪ್ರೌಢಶಾಲೆ ಯ ಮುಖ್ಯ ಶಿಕ್ಷಕರಾದ ರೆ.ಫಾ. ಜಾನ್ಸನ್ ಪಿಂಟೋ ಎಸ್ ಜೆ ಬಿಡುಗಡೆಗೊಳಿಸಿದರು


ಸಮ್ಮೇಳನದ ಶಿರ್ಷಿಕೆಯನ್ನು ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಮಹಾಲಸಾ ಕಲಾ ಶಾಲೆಯ ಪ್ರಾಚಾರ್ಯರಾದ  ಮೋಹನ್ ಕುಮಾರ್ ರವರು ಬಿಡುಗಡೆಗೊಳಿಸಿದರು.
 ಮಂಗಳೂರು ಉತ್ತರ ಚಿತ್ರಕಲಾ ಶಿಕ್ಷಕರ ಘಟಕದ ಅಧ್ಯಕ್ಷರಾದ ರಾಜೇಶ್ವರಿ  ಸಮ್ಮೇಳನ ಸಮಿತಿಯ ಕೋಶಾಧಿಕಾರಿ ದಿನೇಶ್ ಶೆಟ್ಟಿಗಾರ್  ಸುಚೇತ, ಅಂಬಿಕಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು

ಸಮ್ಮೇಳನದ ಲಾಂಛನದ ವಿನ್ಯಾಸವನ್ನು ಕಲಾವಿದ ಹರೀಶ್ ಆಚಾರ್ಯ, ಶಿರ್ಷಿಕೆಯನ್ನು  ಕಲಾವಿದ ಜಾನ್ ಚಂದ್ರನ್ ರವರು ವಿನ್ಯಾಸಗೊಳಿದ್ದರು. 

ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ  ಬಿ.ಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು



Ads on article

Advertise in articles 1

advertising articles 2

Advertise under the article