ಆಝಾದ್ ನಗರ ಅನ್ವಾರುಲ್ ಉಲೂಂ ಮದರಸದಲ್ಲಿ ನಸೀಮೇ ಮಹಬ್ಬ - ಮೀಲಾದ್ ಪೆಸ್ಟ್
Sunday, September 21, 2025
ಜಗತ್ತಿಗೆ ಜಗಜ್ಯೋತಿಯಾಗಿ ಜಗಜಗಿಸಿ ಜನ್ಮ ತಾಳಿದ ಪ್ರವಾದಿ ಮುಹಮ್ಮದ್ ಮುಸ್ತಾಫ(ಸ ಅ)ರವರ 1500 ನೇ ಜನ್ಮ ದಿನಾಚರಣೆ ಯ ಸಲುವಾಗಿ ಉಳ್ಳಾಲ ಆಜಾದ್ ನಗರದ ಅನ್ವಾರುಲ್ ಉಲೂಂ ಮದರಸದಲ್ಲಿ ನಸೀಮೇ ಮಹಬ್ಬ - ಮೀಲಾದ್ ಪೆಸ್ಟ್ ಕಾರ್ಯಕ್ರಮ ನಡೆಯಿತು.
ಅಲ್ ಫಾರೂಕ್ ಜುಮಾ ಮಸೀದಿಯ ಅಧ್ಯಕ್ಷ ರಾದ ಮುಹಮ್ಮದ್ ರವರ ಅಧ್ಯಕ್ಷತೆಯಲ್ಲಿ ಖತೀಬರಾದ ಬಹುಮಾನ್ಯರಾದ ಅಬ್ದುಲ್ ಸಮದ್ ಅಹ್ಸನಿ ರವರು ದುವಾದೊಂದಿಗೆ ನಸೀಮೇ ಮಹಬ್ಬ ಮಿಲಾದ್ ಫೆಸ್ಟ್ ಉದ್ಘಾಟಿಸಿದರು.
ಮದರಸ ವಿದ್ಯಾರ್ಥಿಗಳಿಗೆ ನಡೆದ ಇಸ್ಲಾಮಿಕ್ ಸಾಹಿತ್ಯ ಸ್ಪರ್ಧೆಯಲ್ಲಿ ಕುರ್ತುಬಾ ತಂಡ ಪ್ರಥಮ, ಬುಖಾರಾ ತಂಡ ದ್ವಿತೀಯ ಸ್ಥಾನ ಪಡೆಯಿತು.
ಸಬ್ ಜೂನಿಯರ್ ವಿಭಾಗದಲ್ಲಿ ಮುಹಮ್ಮದ್ ಮಫ್ ರೂಹ್, ಜೂನಿಯರ್ ವಿಭಾಗದಲ್ಲಿ ಮುಹಮ್ಮದ್ ಖೈಸ್,ಸೀನಿಯರ್ ವಿಭಾಗದಲ್ಲಿ ಮುಹಮ್ಮದ್ ಶಯಾನ್ ರವರು ವೈಯಕ್ತಿಕ ಚಾಂಪಿಯನ್ ಶಿಫ್ ಪಡೆದರು
ಎರಡು ದಿನಗಳು ನಡೆದ ಇಸ್ಲಾಮಿಕ್ ಸಾಹಿತ್ಯ ಕಾರ್ಯಕ್ರಮ ದಲ್ಲಿ ಮದರಸದ ಎಲ್ಲಾ ವಿದ್ಯಾರ್ಥಿಗಳು ವಿವಿಧ ಸಾಹಿತ್ಯ ರೂಪದಲ್ಲಿ ಪ್ರವಾದಿಯವರ ಮಿಲಾದ್ ಫೆಸ್ಟ್ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.
ವೇದಿಕೆಯಲ್ಲಿ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಹಾಗೂ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಅಲ್ ಹಾಜ್ ಬಿ.ಜಿ ಹನೀಫ್, ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಉಳ್ಳಾಲ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಶ್ರಫ್, ಮದರಸ ಸಮಿತಿಯ ಸದಸ್ಯರಾದ ಶೌಕತ್, ಸಿದ್ದೀಕ್, ಸಲಾಂ, ಫಾರೂಕ್ ಮದರಸ ಮೇಲ್ವಿಚಾರಕರಾದ ಮುಸ್ತಾಫ, ಅರೇಬಿಕ್ ಟ್ರಸ್ಟ್ ನ ಉಪಾಧ್ಯಕ್ಷ ರಾದ ಅಶ್ರಫ್ ಕೋಡಿ, ಕಾರ್ಯದರ್ಶಿ ಬಶೀರ್ ಸಖಾಫಿ, ಮುಫದ್ದೀಸ್ ಹುಸೇನ್ ಸ ಅದಿ ಉಪಸ್ಥಿತರಿದ್ದರು
ಸದರ್ ಉಸ್ತಾದ್ ಜಲಾಲುದ್ದೀನ್ ಮದನಿ ಸ್ವಾಗತ ನೀಡಿದ ಈ ಕಾರ್ಯಕ್ರಮ ದಲ್ಲಿ ವಿ.ಎ.ಮೊಹಮ್ಮದ್ ಸಖಾಫಿ, ಖಾಸಿಂ ಮದನಿ, ಮೊಹಮ್ಮದ್ ಮದನಿ,ಸಂಶುದ್ದೀನ್ ಮದನಿ ಯವರು ಕಾರ್ಯಕ್ರಮ ದ ಯಶಸ್ಸಿಗಾಗಿ ಕೈ ಜೋಡಿಸಿದರು.
ಮಿಲಾದ್ ಫೆಸ್ಟ್ ಲ್ಲಿ ಭಾಗವಹಿಸಿದ ಮದರಸ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡಿ ಗೌರವಿಸಲಾಯಿತು
ಈ ಸಂಧರ್ಭದಲ್ಲಿ ತಾಜುಲ್ ಉಲಾಮಾರ ಹನ್ನೆರಡನೇ ವರ್ಷದ ಉರೂಸ್ ಕಾರ್ಯಕ್ರಮ ದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು