-->
ಐಟಾ ವತಿಯಿಂದ ನಿವೃತ್ತ ಶಿಕ್ಷಕರಿಗೆ ಮತ್ತು ಸಾಧಕರಿಗೆ ಸನ್ಮಾನ

ಐಟಾ ವತಿಯಿಂದ ನಿವೃತ್ತ ಶಿಕ್ಷಕರಿಗೆ ಮತ್ತು ಸಾಧಕರಿಗೆ ಸನ್ಮಾನ



*ಪೂರ್ವ ಸಿದ್ದತೆ ಯೊಂದಿಗೆ ತರಗತಿಗೆ ತೆರಳಿ -  ಹಂಝ ಅಭಿಪ್ರಾಯ*
 ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲೆ  ಇವರು ಆಯೋಜಿಸಿದ ಬೋಧನೆ ಯೊಂದಿಗೆ  ಜ್ಞಾನ, ಪ್ರೇರಣೆಯಿಂದ ವ್ಯಕ್ತಿತ್ವ- ಎಂಬ ಶಿರ್ಷಿಕೆಯೊಂದಿಗೆ ಶೈಕ್ಷಣಿಕ ಕಾರ್ಯಾಗಾರ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು  ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ  ಹಂಝ ರವರು ಉದ್ಘಾಟಿಸಿ ಮಾತನಾಡಿದರು.


ಒತ್ತಡರಹಿತ ಶಿಕ್ಷಕ - ಉತ್ಸಾಹಭರಿತ ತರಗತಿ ಎಂಬ ವಿಷಯದ ಬಗ್ಗೆ  ಮನಶಾಸ್ತ್ರಜ್ಞರು ಮತ್ತು ಪಿ ಎ ಪ್ರಥಮ ದರ್ಜೆಯ ಕಾಲೇಜಿನ ಪ್ರಾಚಾರ್ಯರಾಗದ ಡಾ. ಸಫ್ರಾಝ್ ಜೆ ಹಾಶಿಂ ಸಂಪನ್ಮೂಲ ವ್ಯಕ್ತಿ ಯಾಗಿ ಮಾತಾಡಿದರು
ತಂತ್ರಜ್ಞಾನ ಯುಗದಲ್ಲಿ ನೈತಿಕ ಶಿಕ್ಷಣದ ಅಗತ್ಯತೆ ಬಗ್ಗೆ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಉಪನ್ಯಾಸ ಕರಾದ ಅಬ್ದುಲ್ ರಝಾಕ್ ಅನಂತಾಡಿ ಯವರು ಮಾತಾಡಿದರು
ನಿವೃತ್ತ ಶಿಕ್ಷಕರ ಪರಿಚಯವನ್ನು ಸಯ್ಯಿದ್ ಮದನಿ ಶಿಕ್ಷಣ ಸಂಸ್ಥೆ ಯ ಮುಖ್ಯಗುರುಗಳಾದ ಕೆ.ಎಂ.ಕೆ ಮಂಜನಾಡಿಯವರು ನೀಡಿದರು



ನಿವೃತ್ತ ಶಿಕ್ಷಕರಾದ ಇಶ್ರತ್ ಯಾಸ್ಮೀನ್, ಅಬ್ದುಲ್ ಮುಬಾರಕ್‌ ಸನ್ಮಾನಿಸಲಾಯಿತು
ಜಿಲ್ಲಾ ಪ್ರಶಸ್ತಿ ವಿಜೇತ ಆದಂ ಹಾಗೂ ರಾಜ್ಯ ಸ್ಕೌಟ್ಸ್ ಪ್ರಶಸ್ತಿ ವಿಜೇತ ಬಿ ಮೊಹಮ್ಮದ್ ತುಂಬೆ ಯವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಐಟಾ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಹನೀಫ್, ಡಾ ಮುಬೀನ್‌ ಉಪಸ್ಥಿತರಿದ್ದರು
ಐಟಾ ರಾಜ್ಯಾಧ್ಯಕ್ಷರಾದ ಮುಹಮ್ಮದ್ ರಝಾ ಮಾನ್ವಿ ಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮೊಹಮ್ಮದ್ ಹಾಶಿರ್ ಕಾರ್ಯಕ್ರಮ ನಿರೂಪಿಸಿದರು
ರಿಯಾಝ್ ಕಾವಳಕಟ್ಟೆ ಧನ್ಯವಾದವಿತ್ತರು

Ads on article

Advertise in articles 1

advertising articles 2

Advertise under the article