ಉಳ್ಳಾಲದ ಹಝ್ರತ್ ಸಯ್ಯಿದ್ ಮದನಿ ಆಂಗ್ಲ ಮಾಧ್ಯಮ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ
Friday, July 12, 2024
ಶಾಲಾ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ
ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಶಿಸ್ತು, ಧೈರ್ಯ, ಪ್ರಾಮಾಣಿಕತೆ ಯನ್ನು ಮೈಗೂಡಿಸಿಕೊಳ್ಳಬೇಕು- ಎಂದು ಹಝ್ರತ್ ಸಯ್ಯಿದ್ ಮದನಿ ಆಂಗ್ಲಮಾಧ್ಯಮ ಸಂಸ್ಥೆಯ ಮುಖ್ಯಶಿಕ್ಷಕ ರಸೂಲ್ ಖಾನ್ ರವರು ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣವಚನ ಬೋಧಿಸುತ್ತಾ ಕರೆ ನೀಡಿದರು
ಅವರು ಹಝ್ರತ್ ಸಯ್ಯುದ್ ಮದನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಉಳ್ಳಾಲ ಇಲ್ಲಿನ ಸಭಾಂಗಣದಲ್ಲಿ ನಡೆದ , 2024-25 ರ ಶೈಕ್ಷಣಿಕ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ತಿನ ಪ್ರಮಾಣ ವಚನ ಕಾರ್ಯಕ್ರಮದ ಸರಳ ಸಮಾರಂಭದಲ್ಲಿ ಮಾತಾಡಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜನಾಬ್ ಇಮ್ತಿಯಾಝ್ ಪಿ . ಬಿ ಯವರು ಮಕ್ಕಳಿಗೆ ಚುನಾವಣಾ ವ್ಯವಸ್ಥೆಯ ಮಹತ್ವ ಹಾಗೂ ಆಯ್ಕೆಗೊಂಡ ಅಭ್ಯರ್ಥಿಗಳ ಜವಾಬ್ದಾರಿಯ ಕುರಿತು ಮಾತನಾಡಿದರು.
ಸಂಸ್ಥೆಯ ಅರಬಿಕ್ ಪ್ರಾಧ್ಯಾಪಕರಾದ ಮೊಹಮ್ಮದ್ ಆಶಿರ್ ಮಾತನಾಡಿ ಮಕ್ಕಳಿಗೆ ಪ್ರೇರಣೆಯನ್ನು ತುಂಬಿದರು. ಪ್ರಾಥಮಿಕ ವಿಭಾಗದ ಶಿಕ್ಷಕಿ ಶ್ರೀಮತಿ ಪ್ರತಿಭಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮೀನಾಕ್ಷಿ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು.ಹಿರಿಯ ಶಿಕ್ಷಕಿ ಶ್ರೀಮತಿ ಸುಜಾತಾ ರವರು ವಂದನಾರ್ಪಣೆ ಗೈದರು. ಸಭೆಯಲ್ಲಿ ಸಂಸ್ಥೆಯ ಅರಬಿಕ್ ವಿಭಾಗದ ಪ್ರಾಧ್ಯಾಪಕರಾದ ಮೊಹಮ್ಮದ್ ಶಾಕಿರ್ ಹಿಮಮಿ ಹಾಗೂ ಸಂಸ್ಥೆಯ ದೈಹಿಕ ಶಿಕ್ಷಕರಾದ ಶ್ರೀ ಖಾಲಿದ್ ಹಾಗೂ ಕಿರಿಯ ಪ್ರಾಥಮಿಕ ವಿಭಾಗದ ಹಿರಿಯ ಶಿಕ್ಷಕರಾದ ಶ್ರೀಮತಿ ಜಯಶ್ರೀರವರು ಉಪಸ್ಥಿತರಿದ್ದರು.
ಮುಹಮ್ಮದ್ ಶಯಾನ್ ಉಸ್ಮಾನ್ ಶಾಲಾ ನಾಯಕನಾಗಿ, ಸಮೀಹ ಖತೀಜಾ ಶಾಲಾ ನಾಯಕಿಯಾಗಿ ಆಯ್ಕೆಯಾದರೆ
ಉಪನಾಯಕನಾಗಿ ಅಬ್ದುಲ್ ಶಮ್ಮಾಝ್ ಹಾಗೂ ಉಪನಾಯಕಿಯಾಗಿ ನೂಹ ಫಾತಿಮ ಆಯ್ಕೆಗೊಂಡಿದ್ದಾರೆ.
ಆಯ್ಕೆಗೊಂಡ ವಿದ್ಯಾರ್ಥಿ ಗಳಿಗೆ ಅಭಿನಂದನಡಗಳು