ಸಮನ್ವಯ ಶಿಕ್ಷಕರ ಜಿಲ್ಲಾ ಸಂಘದ ಮಹಾಸಭೆ
Sunday, August 3, 2025
*ಸಮನ್ವಯ ಶಿಕ್ಷಕರ ಜಿಲ್ಲಾ ಸಂಘದ ಏಳನೇ ಮಹಾಸಭೆ*
ಮಂಗಳೂರು, ಅ. 03: ಶಿಕ್ಷಕ-ಶಿಕ್ಷಣ -ವಿದ್ಯಾರ್ಥಿ ಮತ್ತು ಪೋಷಕರ ನಡುವಿನ ಪ್ರಮುಖ ಸಂಪರ್ಕ ಸೇತುವಾಗಿ ಶಿಕ್ಷಕರ ಕಾರ್ಯಕ್ಷೇತ್ರವನ್ನು ವಿಶಾಲವಾಗಿಸುವ ಮತ್ತು ಶಿಕ್ಷಣದ ಕಾರ್ಯ ಚಟುವಟಿಕೆಗಳಿಗೆ ಕಾಲದ ಬೇಡಿಕೆಗನುಗುಣವಾಗಿ ನವ ನವೀನ ಬದಲಾವಣೆಗೆ ಹೊಂದಿಕೊಳ್ಳುವ ಮತ್ತು ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮನ್ವಯ ಶಿಕ್ಷಕರ ಸಂಘ ಸ್ಥಾಪನೆಯಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಅಬ್ದುಲ್ ಮಜೀದ್ ಎಸ್ ಅಭಿಪ್ರಾಯ ಪಟ್ಟರು. ಅವರು ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಸಮನ್ವಯ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಜಿಲ್ಲಾ ಕಾರ್ಯದರ್ಶಿ ಹಾರೀಸ್ ಬಾಂಬಿಲ ದ್ವಿವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ತೌಸೀಪ್ ಪಾಂಡವರಕಲ್ಲು ಲೆಕ್ಕ ಪತ್ರ ಮಂಡಿಸಿದರು. 2025-27 ರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಮಾಜಿ ಜಿಲ್ಲಾಧ್ಯಕ್ಷರಾದ ಕೆ ಎಂ ಕೆ ಮಂಜನಾಡಿ ನಿರ್ವಹಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಬಿ ಎಂ ರಫೀಕ್ ತುಂಬೆ ಸ್ವಾಗತಿಸಿದರು ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಮನಾಝಿರ್ ಕಾರ್ಯಕ್ರಮ ನಿರೂಪಿಸಿದರು.
ನೂತನ ಅಧ್ಯಕ್ಷರಾಗಿ ಅಕ್ಬರ್ ಅಲಿ, ಉಪಾಧ್ಯಕ್ಷ ರಾಗಿ ಮಹಮ್ಮದ್ ಮನಾಝಿರ್, ಹಸೀನಾ ಮಲ್ನಾಡ್ ಕಾರ್ಯದರ್ಶಿ ಯಾಗಿ ಮಹಮ್ಮದ್ ಶಾಹಿದ್, ಜೊತೆ ಕಾರ್ಯದರ್ಶಿಯಾಗಿ ಲಿಯಾವುದ್ದೀನ್ ಮತ್ತು ಆಯಿಶಾ ಸಮೀರಾ ,ಕೋಶಾಧಿಕಾರಿಯಾಗಿ ಇಕ್ಬಾಲ್ ಉಚ್ಚಿಲ ಆಯ್ಕೆಯಾದರು. ಉಳಿದಂತೆ ಹದಿನೈದು ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಶಿಕ್ಷಕರಿಗೆ ಏರ್ಪಡಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.