ಹಳೆಕೋಟೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಮೈದಾನಕ್ಕೆ ಅಳವಡಿಸಿದ ಇಂಟರ್ಲಾಕ್ ಉದ್ಘಾಟನೆ ಮಕ್ಕಳಿಗೆ ಕೈ ತೊಳೆಯುವ ನೀರಿನ ತೊಟ್ಟಿಯ ಉದ್ಘಾಟನೆ , ಮತ್ತು ಉಚಿತ ಸಮವಸ್ತ್ರ ವಿತರಣೆ
Sunday, August 10, 2025
ಹಳೆಕೋಟೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಮೈದಾನಕ್ಕೆ ಅಳವಡಿಸಿದ ಇಂಟರ್ಲಾಕ್ ಉದ್ಘಾಟನೆ ಮಕ್ಕಳಿಗೆ ಕೈ ತೊಳೆಯುವ ನೀರಿನ ತೊಟ್ಟಿಯ ಉದ್ಘಾಟನೆ , ಮತ್ತು ಉಚಿತ ಸಮವಸ್ತ್ರ ವಿತರಣೆ
ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮದನಿ ಪ್ರೌಢಶಾಲೆಯ ಶಾಲಾ ಆಟದ ಮೈದಾನಕ್ಕೆ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸದಾಶಿ ಉಳ್ಳಾಲ್ ರವರ ಮೂಲಕ ಅಳವಡಿಸಲಾದ ಇಂಟರ್ಲಾಕ್, ಮಕ್ಕಳಿಗೆ ಕೈ ತೊಳೆಯುವ ನೀರಿನ ನಲ್ಲಿ, ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ನೀಡಲ್ಪಡುವ ಉಚಿತ ಸಮವಸ್ತ್ರವನ್ನು ಕರ್ನಾಟಕ ರಾಜ್ಯದ ವಿಧಾನಸಭಾಧ್ಯಕ್ಷರು, ಮಂಗಳೂರು ಕ್ಷೇತ್ರದ ಜನಪ್ರಿಯ ಶಾಸಕರು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಉಪಮುಖ್ಯ ಆಯುಕ್ತರಾದ ಜನಾಬ್ ಹಾಜಿ ಯುಟಿ ಖಾದರ್ ಫರೀದರವರು ಉದ್ಘಾಟಿಸಿದರು
ಸರಕಾರಿ ಶಾಲೆಗಳಿಗೆ ಸರಕಾರವು ಉಚಿತ ಸವಲತ್ತುಗಳನ್ನು ನೀಡುವುದಿದ್ದರು ಅನುದಾನಿತ ಶಾಲೆಯು ಇದರಿಂದ ವಂಚಿತರಾಗಬಾರದು ಎಂಬಂತಹ ದೃಷ್ಟಿಯಿಂದ ಶಾಲಾ ಮುಖ್ಯ ಉಪಾಧ್ಯಾಯರ ಶ್ರಮದ ಮೂಲಕ ಶಾಲಾ ಅಭಿವೃದ್ಧಿ ಸಮಿತಿಯು ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡುತ್ತದೆ. ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಇದಕ್ಕೆ ಪ್ರೇರಣೆ ನೀಡುವುದು ಶ್ಲಾಘನೀಯ ಎಂದು ಮಾನ್ಯ ಸ್ಪೀಕರ್ ರವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಹಾಜಿ ಬಿ.ಜಿ ಹನಿಫ್ ರವರು ವಹಿಸಿದ್ದು, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಇಮ್ತಿಯ ಅಹಮದ್, ಹಾಜಿ ಮೊಹಮ್ಮದ ತ್ವಹ. ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಸಮಾಜಸೇವಕ ತೊಕ್ಕೋ ಟಿನ ಜಿಮ್ ಮಾಲಕ ತ್ವಾ ಹಾ, ಅಲ್ತಾಫ್ ಯು ಎಚ್, ಇಬ್ರಾಹಿಂ ಎಂ ಹೆಚ್ ಕರೀ ಮ್, ಯು ಎಚ್ , ಸಿಆರ್ಪಿ ಮೋಹನ್ ಕುಮಾರ್, ಗುತ್ತಿಗೆದಾರ ಅಬ್ದುಲ್ ರಶೀದ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಹಳೇ ವಿದ್ಯಾರ್ಥಿ ಮತ್ತು ಶಾಲೆಯ ಬೆನ್ನೆಲುಬಾದ ಇಮ್ತಿಯಾಜ್, ಮಾಸುನ್ ಗ್ರಾನೆಟ್ ಮಾಲಕ ಮುನೀರ್, ಉಳ್ಳಾಲ ದರ್ಗಾದ ಅಧ್ಯಕ್ಷ ಹನೀಫ್ ಹಾಜಿಯವರನ್ನು ಗೌರವಿಸಲಾಯಿತು.
ಹಿರೇ ಕ್ ಪಡೆದ ಆತ್ಮೀಯ ಬುಲ್ ಬುಲ್ ಗಳನ್ನು ರಾಜ್ಯ ಉಪಮುಖ್ಯ ಆಯ್ತರಾದ ಯುಟಿ ಖಾದರ್ ಫ ರೀದ್ ರ ವವರು ಗೌರವಿಸಿದರು ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸದಾಶಿವಉಳ್ಳಾ ಲ್ ರವರನ್ನು ಮಾನ್ಯ ಸ್ಪೀಕರ್ ಅವರು ಸನ್ಮಾನಿಸಿದರು. ಪ್ರಾರಂಭದಲ್ಲಿ ಶಾಲಾ ಮುಖ್ಯಸ್ಥರಾದ ಶ್ರೀ ಕೆ ಎಂ ಕೆ ಮಂಜನಾಡಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಸಪ್ನ ರವರು ವಂದಿಸಿದರು