ಹಳೆಕೋಟೆ ಸಯ್ಯದ್ ಮದನಿ ಶಾಲೆಯಲ್ಲಿ ವನಮಹೋತ್ಸವ, ಮಂತ್ರಿಮಂಡಲದ ಪದಗ್ರಹಣ ಮತ್ತು ವಿವಿಧ ಸಂಘಗಳ ಉದ್ಘಾಟನೆ, ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಮಾಹಿತಿ ಶಿಬಿರ,
Saturday, August 2, 2025
ಹಳೆಕೋಟೆ ಸಯ್ಯದ್ ಮದನಿ ಶಾಲೆಯಲ್ಲಿ ವನಮಹೋತ್ಸವ, ಮಂತ್ರಿಮಂಡಲದ ಪದಗ್ರಹಣ ಮತ್ತು ವಿವಿಧ ಸಂಘಗಳ ಉದ್ಘಾಟನೆ, ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಮಾಹಿತಿ ಶಿಬಿರ,
ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮದನಿ ಪ್ರೌಢಶಾಲೆ ಯಲ್ಲಿ ವನಮಹೋತ್ಸವ, ಮಂತ್ರಿಮಂಡಲದ ಪದಗ್ರಹಣ, ಮಾದಕ ದ್ರವ್ಯಗಳ ದುಷ್ಪರಿಣಾಮದ ಅರಿವು,ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ಹಾಜಿ ಮಹಮ್ಮದ್ ತ್ವಾಹ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಉಳ್ಳಾಲ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಶ್ರೀಕೃಷ್ಣರವರು ಮಾದಕ ದ್ರವ್ಯಗಳ ದುಷ್ಪರಿಣಾಮಗಳು, ಮತ್ತು ಅದರ ವಿರುದ್ಧವಿರುವ ಕಾನೂನಿನ ಅರಿವನ್ನು ಮಕ್ಕಳಿಗೆ ತಿಳಿಸಿದರು. ಮಾದಕದ್ರ ವ್ಯಇಂದು ಸಮಾಜಕ್ಕೆ ಕಂಠಕವಾಗಿದ್ದು ಇದರಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದು ತಿಳಿಸಿದರು. ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ತಹಸೀನ ರವರು ಸಾಲ ಮಂತ್ರಿಮಂಡಲದ ಉದ್ಘಾಟನೆಯನ್ನು ನೆರವೇರಿಸಿದರು. ಶಾಲಾ ಮುಖ್ಯ ಶಿಕ್ಷಕ ಕೆ ಎಂ ಕೆ ಮಂಜನಾಡಿ ಪ್ರತಿಜ್ಞಾವಿಧಿ ಬೋಧಿಸಿದರು. ಮಂಗಳೂರಿನ ಪ್ರತಿಸ್ಟಿತ ಸಿಟಿ ಮೂಡ್ ವಸ್ತ್ರ ಮಳಿಗೆಯ ಮಾಲಕ ನೌಫಲ್ ರವರು ವಿವಿಧ ಸಂಘಗಳ ಉದ್ಘಾಟನೆಯನ್ನು ನೆರವೇರಿಸಿದರು ಹಾಜಿ ಮೊಹಮ್ಮದ್ ತ್ವಾಹಾ ಅವರು ಸಾಂಕೇತಿ ವಾಗಿ ಸಸಿ ನೆಡುವುದರ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಧಿಕಾರಿ ಶ್ರೀ ಎಂಪಿ ಜ್ಞಾನೇಶ್, ಉಳ್ಳಾ ಲ ಗುಚ್ಚ ಸಂಪನ್ಮೂಲ ವ್ಯಕ್ತಿ ಶ್ರೀ ಮೋಹನ್ ಕುಮಾರ್ ರವರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ಅಲ್ತಾಫ್ ಯು ಹೆಚ್, ಕರಿಮ್ ಹಳೆಕೋಟೆ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಮುಖ್ಯ ಶಿಕ್ಷಕ ಕೆ. ಎಂ ಕೆ ಮಂಜ ನಾಡಿ ಸ್ವಾಗತಿಸಿದರು. ಶಿಕ್ಷಕಿಯರಾದ ಶ್ರೀಮತಿ ಬಬಿತಾ ಸೆಲಿನ್ ಡಿ ಸೋಜಾ, ಶ್ರೀಮತಿ ರಮ್ಲಾ ಬಾನು ವನಮಹೋತ್ಸವದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಶಾಲಾ ವಿದ್ಯಾರ್ಥಿಗಳಿಂದ ವನಮಹೋತ್ಸವ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿಕ್ಷಕಿ ಶಶಿಕಲಾ ರವರು ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಶ್ರೀಮತಿ ಸಪ್ನಾ ರವರು ವಂದಿಸಿದರು.