ಶಿಕ್ಷಕ ವೃತ್ತಿಯು ಜವಾಬ್ದಾರಿ ಯುತ ವೃತ್ತಿ ಮತ್ತು ಮನೋಲ್ಲಾಸದ ವೃತ್ತಿ - ಹೆಚ್ ಆರ್ ಈಶ್ವರ್
Thursday, July 31, 2025
ಶಿಕ್ಷಕ ವೃತ್ತಿಯು ಜವಾಬ್ದಾರಿಯುತ ವೃತ್ತಿ ಮತ್ತು ಮನೋ ಉಲ್ಲಾಸದ ವೃತ್ತಿ :- ಎಚ್ಆರ್ ಈಶ್ವರ್
ಶಿಕ್ಷಕ ವೃತ್ತಿಯು ಬಹಳಷ್ಟು ಜವಾಬ್ದಾರಿಯುತವಾದ ವೃತ್ತಿಯಾಗಿದ್ದು ಒಮ್ಮೆ ಶಿಕ್ಷಕರಾದವರು ಜೀವನಪರ್ಯಂತ ತನ್ನ ವೃತ್ತಿಯನ್ನು ಗೌರವಿಸುತ್ತಾರೆ. ಈವೃತ್ತಿಯಿಂದ ನಿರ್ಗಮಿಸುವಾಗ ಪರಿತಪಿಸುತ್ತಾರೆ. ಬೆಳಿಗ್ಗೆ ಶಾಲೆಗೆ ಬಂದು ವಿದ್ಯಾರ್ಥಿಗಳೊಂದಿಗೆ ತನ್ನ ಕೌಶಲ್ಯತೆಯೊಂದಿಗೆ ತನ್ನ ವೃತ್ತಿಯನ್ನು ಪ್ರಾರಂಭಿಸಿದರೆ ಎಲ್ಲಾ ನೋವು ನಲಿವುಗಳಿಂದ ದೂರವಿದ್ದು ಮನಸ್ಸಿಗೆ ಉಲ್ಲಾಸವನ್ನು ಮತ್ತು ಸಂತಸವನ್ನು ತುಂಬುತ್ತಾರೆ. ಇಂಥ ಪವಿತ್ರವಾದ ವೃತ್ತಿ ಜೀವನದಿಂದ ನಿರ್ಗಮಿಸುವುದು ಅಥವಾ ನಿವೃತ್ತಿಯಾಗುವುದು ಬಹಳಷ್ಟು ನೋವಿನ ಸಂಗತಿಯಾಗಿದೆ ಎಂದು ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಆರ್ ಈಶ್ವರ್ ರವರು ಹೇಳಿದರು. ಅವರು ಉಳ್ಳಾಲದ ಟಿಪ್ಪು ಸುಲ್ತಾನ್ ಪ್ರೌಢಶಾಲೆಯಲ್ಲಿ 28 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತಿಯಾದ ಶ್ರೀಮತಿ ಶಾಹಿನಾ ಬೇಗಂ ರವರನ್ನ ವೃತ್ತಿಯಿಂದ ಬೀಳ್ಕೊಡುತ್ತ ಮಾತನಾಡಿದರು.
ಶಾಲೆ ಕೈತೋಟದಲ್ಲಿ ಗಿಡವನ್ನು ನೆಡುತ್ತಾ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಇಮ್ತಿಯಾಜ್ ಅಹಮದ್ ರವರು ಪ್ರಕೃತಿಯಲ್ಲಿ ಮನುಷ್ಯರಿಗೆ ಸರ್ವಸ್ವವನ್ನು ಕೊಡುವ ಮರ ಗಿಡಗಳನ್ನು ನೆಟ್ಟು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಮಕ್ಕಳಲ್ಲಿ ನಾಯಕತ್ವದ ಗುಣ, ಪ್ರಜಾಪ್ರಭುತ್ವದ ಅರಿವು, ಜವಾಬ್ದಾರಿತನವನ್ನು ತನ್ನದಾಗಿಸಿಕೊಳ್ಳುವ ಶಾಲಾ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದ ಸೈಯದ್ ಮದನಿ ವಿದ್ಯಾ ಸಂಸ್ಥೆ ಹಳೆಕೋಟೆ ಇದರ ಮುಖ್ಯೋಪಾಧ್ಯಾಯರಾದ ಶ್ರೀ ಕೆಎಂ ಕೆ ಮಂಜನಾಡಿಯವರು ಸಂಸತ್ತಿನ ಎಲ್ಲಾ ವಿಧವಾದ ಪರಿಜ್ಞಾನವನ್ನು ಶಾಲಾ ಸಂಸತ್ತು ನೀಡುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಲೆಯ ವಿವಿಧ ಸಂಘಗಳ ಉದ್ಘಾಟನೆಯನ್ನು ಅವರು ಮಾಡಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ ಶೆಟ್ಟಿ ಅವರು ಪ್ರಾಸ್ತಾವಿಕ ದೊಂದಿಗೆ ಸ್ವಾಗತವನ್ನು ಮಾಡಿದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಯುತ ಅಖಿಲ್ ರವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಂಸತ್ತಿನ ನಿರ್ದೇಶಕರಾದ ಬಿಎಂ ರಫೀಕ್ ತುಂಭೆ ಅವರು ಧನ್ಯವಾದವಿತ್ತರು