ಕೋಟೆಪುರ ಟಿಪ್ಪು ಸುಲ್ತಾನ್ ಪ್ರೌಡ ಶಾಲೆಯಲ್ಲಿ ಪಿಂಕ್ ಬೂತ್ ಪರಿಕಲ್ಪನೆಯಲ್ಲಿ ವಿದ್ಯಾರ್ಥಿ ಸಂಸತ್ತು ಚುನಾವಣೆ
Tuesday, June 24, 2025
ಪ್ರಜಾಪ್ರಭುತ್ವ ದ ಚುನಾವಣಾ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಉದ್ದೇಶದಿಂದ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಚುನಾವಣೆಯನ್ನು ಶಿಕ್ಷಕರು ನಡೆಸಿದ್ದಾರೆ
ಕಳೆದ ಕೆಲವು ಚುನಾವಣೆಯಲ್ಲಿ ಅತೀ ಹೆಚ್ಚು ಮಹಿಳೆಯರು ಇರುವ ಮತಗಟ್ಟೆಯನ್ನು ಪಿಂಕ್ ಮತಗಟ್ಟೆ ಎಂದು ಗುರುತಿಸಿ ಚುನಾವಣೆ ಪ್ರಕ್ರಿಯೆ ನಡೆಸಲಾಗಿತ್ತು
ಇದೇ ಮಾದರಿ ಯಲ್ಲಿ ಅನುದಾನಿತ ಟಿಪ್ಪು ಸುಲ್ತಾನ್ ಪ್ರೌಢಶಾಲೆ, ಕೋಟೆಪುರ ಉಳ್ಳಾಲದಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತು ಚುನಾವಣೆಯನ್ನು ಪಿಂಕ್ ಬೂತ್ ಮತಗಟ್ಟೆಯ ಪರಿಕಲ್ಪನೆಯಲ್ಲಿ ನಡೆಸಲಾಯಿತು
ಇಲ್ಲಿ ವಿದ್ಯಾರ್ಥಿ ನಿಯರು ಜಾಸ್ತಿ ಇರೋದರಿಂದ ಪಿಂಕ್ ಬೂತ್ ನ್ನು ರಚಿಸಿ ಚುನಾವಣೆ ನಡೆಸಲಾಯಿತು
ಮತಗಟ್ಟೆಯ ಒಳಗೂ ಹೊರಗೂ ಗುಲಾಬಿ ಬಣ್ಣದ ಬಟ್ಟಯಿಂದ ಹಾಗೂ ಗುಲಾಬಿ ಬಣ್ಣದ ಬಲೂನ್ ನಿಂದ ಶೃಂಗರಿಸಲಾಗಿತ್ತು
ಮತಗಟ್ಟೆಯ ಮಹಿಳಾಧಿಕಾರಿಗಳು ಪಿಂಕ್ ಬಣ್ಣದ ಸಾರಿ ತೊಟ್ಟು ಕರ್ತವ್ಯ ನಿರ್ವಹಿಸಿದರು
ನಾಮಪತ್ರ ಸಲ್ಲಿಸುವುದು, ನಾಮಪತ್ರ ಹಿಂತೆಗೆಯುವುದು, ನಾಮ ಪತ್ರ ತಿರಸ್ಕ್ರತ, ಚಿಹ್ನೆಗಳ ಆಯ್ಕೆ ಹೀಗೆ ಚುನಾವಣಾ ಪ್ರಕ್ರಿಯೆಗಳು ನಡೆದು ಕೊನೆಯಲ್ಲಿ ಮೂರು ಅಭ್ಯರ್ಥಿಗಳು ಕಣದಲ್ಲಿ ಇದ್ದರು
ಇವಿಎಂ ಮೊಬೈಲ್ ಆಪ್ ಬಳಸಿ ಚುನಾವಣೆ ನಡೆಸಲಾಯಿತು
ಶೇಕಡಾ 92% ಮತದಾನವಾಯಿತು
ಹತ್ತನೇ ತರಗತಿಯ ಫಾತಿಮಾರಿಧಾ ಮುಖ್ಯಮಂತ್ರಿಯಾಗಿ, ಮೊಹಮ್ಮದ್ ರಿಮಾಝ್ ಸಾಹಿಲ್ ಉಪಮುಖ್ಯಮಂತ್ರಿಯಾಗಿ ಹಾಗು ಅಹ್ಮದ್ ನಾಝಿಂ ವಿರೋದ ಪಕ್ಷದ. ನಾಯಕರಾಗಿ ಆಯ್ಕೆಯಾದರು
ಮುಖ್ಯ ಶಿಕ್ಷಕಿ ಗೀತಾ ಡಿ ಶೆಟ್ಟಿ ಯವರ ನಿರ್ದೇಶನದಂತೆ ಚಿತ್ರಕಲಾ ಶಿಕ್ಷಕ ಬಿ ಎಂ ರಫೀಕ್ ತುಂಬೆಯವರು ಸಂಸ್ಥೆಯ ಸಿಬ್ಬಂದಿ ಗಳ ಸಹಕಾರದೊಂದಿಗೆ ಪಿಂಕ್ ಬೂತ್ ರಚನೆ ಮಾಡಿದ್ದರು.