-->
ಹಳೇಕೋಟೆ ಶಾಲೆಯಲ್ಲಿ ಮಾದಕ ದ್ರವ್ಯ ಗಳ ಬಗ್ಗೆ ಜಾಗೃತಿ ಶಿಬಿರ

ಹಳೇಕೋಟೆ ಶಾಲೆಯಲ್ಲಿ ಮಾದಕ ದ್ರವ್ಯ ಗಳ ಬಗ್ಗೆ ಜಾಗೃತಿ ಶಿಬಿರ



ಹಳೆಕೋಟೆ ಶಾಲೆಯಲ್ಲಿ ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಶಿಬಿರ 


 ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮದನಿ ಪ್ರೌಢಶಾಲೆಯಲ್ಲಿ ಮಾದಕ ದ್ರವ್ಯ ಗಳಿಂದ ಉಂಟಾಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಿಟ್ಟ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಸನ್ಮಾನ್ಯ ಶ್ರೀ ಸುಕೇಶ್ ರವರು ಮಕ್ಕಳಿಗೆ ತಿಳಿಸಿದರು. ಕ್ಯಾನ್ಸರ್ ಅಂತ ಮಾರಕ ರೋಗಗಳಿಗೆ ಇದು ಕಾರಣವಾಗುತ್ತದೆ ಆದುದರಿಂದ ಮಾದಕ ವಸ್ತುಗಳಿಂದ ನಾವು ದೂರವಿರಬೇಕು ಎಂದು ಮಕ್ಕಳಿಗೆ ತಿಳಿಸಿದರು. ನಿಟ್ಟೆ ಮಾನಸಿಕ ಆರೋಗ್ಯ  ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಿರು ನಾಟಕದ ಮೂಲಕ ಮಾದಕ ದ್ರವ್ಯದ ದುಷ್ಪರಿಣಾಮವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಮತ್ತು ನೃತ್ಯದ ಮೂಲಕ ಕೈತೊಳೆಯುವ ಚಟುವಟಿಕೆಗಳನ್ನು  ವಿದ್ಯಾರ್ಥಿಗಳಿಗೆ ಮಾಡಿ ತೋರಿಸಿದರು. ಈ ಸಂದರ್ಭದಲ್ಲಿ ನಿಟ್ಟಿ ಮಾನಸಿಕ ಆರೋಗ್ಯ ವಿಭಾಗದ ನರ್ಸಿಂಗ್ ಕಾಲೇಜಿನ ಉಪನ್ಯಾಸಕರುಗಳಾದ ಶ್ರೀಮತಿ ಪ್ರತಿಮಾ ಸೇರಿಗಾರ್ತಿ, ಶ್ರೀಮತಿ ಸುವಿಕ್ಷ ಆರ್ ಭಂಡಾರಿ, ಮತ್ತು ಕಾಲೇಜಿನ ಪಿಜಿ ವಿದ್ಯಾರ್ಥಿಗಳು ಹಾಗೂ ನರ್ಸಿಂಗ್  ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಶಾಲಾ ಮುಖ್ಯ ಶಿಕ್ಷಕರಾದ ಕೆಎಂ ಕೆಮಂಜನಾಡಿ ಅವರು ಸ್ವಾಗತಿಸಿ ವಂದಿಸಿದರು

Ads on article

Advertise in articles 1

advertising articles 2

Advertise under the article