ಯೋಗವು ರೋಗವನ್ನು ಗುಣ ಮಾಡುತ್ತದೆ ಯೋಗದಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ - ಕೆ ಎಂ ಕೆ ಮಂಜನಾಡಿ
Saturday, June 21, 2025
ಯೋಗವು ರೋಗವನ್ನು ಗುಣ ಮಾಡುತ್ತದೆ. ಯೋಗದಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಕೆ ಎಂ ಕೆ ಮಂಜನಾಡಿ.
ಸೈಯದ್ ಮದನಿ ಜಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮದನಿ ಪ್ರೌಢಶಾಲೆಯಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಯೋಗ ಇಂದು ಎಲ್ಲಾ ವಯಸ್ಸಿನ ಜನರಿಗೆ ಉತ್ತಮ ಆರೋಗ್ಯಕ್ಕಾಗಿ ಅತ್ಯುತ್ತಮ ಔಷದಿಯಾಗಿದೆ. ಆಧುನಿಕ ಯುಗದಲ್ಲಿ ಕಂಡು ಬರುವ ಹೊಸ ಹೊಸ ರೋಗಗಳಿಗೆ ಯೋಗ ಔಷಧಿಯಾಗಿದೆ ಆದುದರಿಂದ ಪ್ರತಿನಿತ್ಯ ನೂರಾರು ಮಾತ್ರೆಗಳನ್ನು ನುಂಗುವ ಬದಲಿಗೆ ಯೋಗವನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ ಎಂದು ಸಂಸ್ಥೆಯ ಮುಖ್ಯಸ್ಥರಾದ ಕೆ ಎಂ ಕೆ ಮಂಜನಾಡಿಯವರು ಹೇಳಿದರು. ಆವಿಷ್ಕಾರ ಯೋಗ ಮಂಗಳೂರು ಇದರ ಮುಖ್ಯಸ್ಥರಾದ ಗಿರಿಯಪ್ಪ ರವರು ಯೋಗ ಪ್ರದರ್ಶನದ ನೇತೃತ್ವವನ್ನು ವಹಿಸಿದ್ದರು.
ವಿದ್ಯಾರ್ಥಿಗಳು ಅತ್ಯುತ್ತಮ ಯೋಗ ಪ್ರದರ್ಶನ ಮಾಡಿದರು. ಸಂಸ್ಥೆಯ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು