-->
ಯುಗಾದಿ..........ಭಾಗ್ಯಶ್ರೀ ಕಂಬಳಕಟ್ಟ ರವರ ಕವನ

ಯುಗಾದಿ..........ಭಾಗ್ಯಶ್ರೀ ಕಂಬಳಕಟ್ಟ ರವರ ಕವನ

ಕವನದ ಶೀರ್ಷಿಕೆ: ಯುಗಾದಿ ಹಬ್ಬ

ಹೊಸ ಹರುಷ ತಂದಿದೆ ಯುಗಾದಿ ಹಬ್ಬ
ಬೇವು ಬೆಲ್ಲದ ಸವಿಯಾ ಮೆಲ್ಲೋ ಹಬ್ಬ ||

ಬಾಗಿಲಿಗೇ ಕಟ್ಟೋಣ ತಳಿರು ತೋರಣ
ಅಕ್ಷಯವಾಗಲಿ ಸಂತಸದ ವಾತಾವರಣ |
ಕಳೆದಿಹ ಕಹಿ ನೆನಪುಗಳ ಮರೆಯೋಣ
ಸಮಚಿತ್ತದಿ ಜೀವನವ ಮುನ್ನಡೆಸೋಣ ||

ಮನೆ ಮುಂದೆ ರಂಗೋಲಿಯ ಬಿಡಿಸುತ
ಹೊಸ ವರುಷಕೇ ಸ್ವಾಗತವಾ ಕೋರುತ  |
ನವ ಉಡುಗೆಯ ಸಂಭ್ರಮದಿ ಧರಿಸುತ
ಖುಷಿಯ ಹಂಚೋಣ ನಾವು ಅನವರತ ||

ಹಿರಿಯರಿಗೆ ತಲೆಯ ಬಾಗಿ ನಮಿಸೋಣ
ಬಗೆ ಬಗೆಯ ಭಕ್ಷ್ಯ ಗಳನು ಸವಿಯೋಣ |
ಜೀವನವು ಸುಖ ದುಃಖಗಳ ಸಮ್ಮಿಶ್ರಣ
ಅರಿತು ಸಾಗಿಸೋಣ ಈ ಬಾಳ ಪಯಣ ||

✍️ ಭಾಗ್ಯಶ್ರೀ ಕಂಬಳಕಟ್ಟ, ಉಡುಪಿ.

Ads on article

Advertise in articles 1

advertising articles 2

Advertise under the article