-->
ಯಶೋದಾ ಗಾಣಿಗ ಕುಂದಾಪುರ ರವರ ಕವನ

ಯಶೋದಾ ಗಾಣಿಗ ಕುಂದಾಪುರ ರವರ ಕವನ

ಕವಿತೆ 
 ಶೀರ್ಷಿಕೆ:-ಯುಗಾದಿ 

ಯುಗಾದಿ ಹಬ್ಬ ಬಂದಿತಮ್ಮ
ಮನೆಮನೆಗೆ ಹಬ್ಬ ತಂದಿತಮ್ಮ
ಸಡಗರ-ಸಂಭ್ರಮ ಬಂತಮ್ಮ
ಹೊಸವರುಷಕೆ ಕಾಲಿಟ್ಟಿತಮ್ಮ.

 ಬೇವು-ಬೆಲ್ಲವನ್ನು ಸವಿಯುತ
 ಮಕ್ಕಳು ಮನೆಮಂದಿ ಮೆಲ್ಲುತ್ತ
 ಸಂತಸವ ನಾವು ಸಡಗರದತ್ತ
 ಪ್ರಕೃತಿಯ ವಿಸ್ಮಯವುಎನ್ನುತ್ತ.

ತಳಿರು ತೋರಣದಿ ಅಲಂಕಾರಿಸಿ
ಮನೆಯ ಬಾಗಿಲ ಶೃoಗರಗೊಳಿಸಿ
ಮಾವಿನ ತುಂಬೆಲ್ಲ ಹಚ್ಚ ಹಸಿರು
ಹಬ್ಬದಿ ಮನೆಯಲ್ಲಿ ಶೋಭಿಸಿರು.

 ಮಾವಿನ ಮರದಲ್ಲಿ ಚಿಗುರೆಲೆ
ಬೇವು ಕಹಿ ಆದರು ಸವಿಯುತ್ತಲೇ
ಚೈತ್ರದ ಚಿಗುರಿಂದು ಬಂದಮೇಲೆ
ಹರುಷದ ಹೊನಲು ಪದಮಾಲೆ.

ಯಶೋದ. ಗಾಣಿಗ, ಗೃಹಿಣಿ.ಕುಂದಾಪುರ.

Ads on article

Advertise in articles 1

advertising articles 2

Advertise under the article