SSLC ವಿದ್ಯಾರ್ಥಿಗಳ ಪಾಸಿಂಗ್ ಪ್ಯಾಕೇಜ್ 2026 ಬಿಡುಗಡೆ
Saturday, January 24, 2026
2026 26 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸುಗಮ ತೇರ್ಗಡೆಗಾಗಿ ವಿದ್ಯಾ ಇಲಾಖೆಯಿಂದ ಹೊರಡಿಸಿದ ಪ್ರಶ್ನೆ ಕೋಟಿ ಸಂಗ್ರಹ ಪುಸ್ತಕವನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶೈಕ್ಷಣಿಕ ಕ್ರಾಂತಿಕಾರಕ ಸ್ವಯಂಸೇವಾ ಸಂಸ್ಥೆಯಾದ ಕ್ಯಾಲೆಂಡರ್ ಫೌಂಡೇಶನ್ ಮುದ್ರಿಸಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನಿಷ್ಠ ಅಂಕ ಪಡೆಯಲಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಯೋಜನೆಯನ್ನು ಹಾಕಿಕೊಂಡಿದೆ ಪಾಸಿಂಗ್ ಪ್ಯಾಕೇಜ್ ಎಂದು ಹೆಸರಿನ ಈ ಪ್ರಶ್ನೆ ಕೋಟಿ ಪುಸ್ತಕವನ್ನು ಸೈಯದ್ ಮದನಿ ವಿದ್ಯಾ ಸಂಸ್ಥೆ ಹಳೆಕೋಟೆ ಇಲ್ಲಿನ ಮುಖ್ಯ ಶಿಕ್ಷಕರಾದ ಶ್ರೀಯುತ ಕೆ ಎಮ್ ಕೆ.ಮಂಜನಾಡಿಯವರು. ಬಿಡುಗಡೆಗೊಳಿಸಿದರು. ಶೈಕ್ಷಣಿಕ ಕಾಳಜಿಯೊಂದಿಗೆ ಕಳೆದ ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕಾರ್ಯಾಧಾರವನ್ನು ಉಚಿತವಾಗಿ ಹಮ್ಮಿಕೊಳ್ಳುತ್ತಿರುವ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಆರ್ಯವೈಖರಿಯನ್ನು ಪ್ರಶಂಸಿಸಿದ ವಿದ್ಯಾ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಉಚಿತವಾಗಿ ನೀಡುತ್ತಿರುವ ಸಂಸ್ಥೆಗೆ ಸರೂರು ಸಹಕರಿಸಬೇಕು ಎಂದರು. ಮತ್ತು ವಿದ್ಯಾರ್ಥಿಗಳು ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನಿರ್ದೇಶಕರುಗಳಾದ ಹಮೀದ್ ಕಣ್ಣೂರ್, ಮಜೀದ್ ತುಂಬೆ, ಗಣಿತ ವಿಷಯದ ರಾಜ್ಯಸಂಪನ್ಮೂಲ ವ್ಯಕ್ತಿ ಭಾರತ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿನಯ, ಸೈಯದ್ ಮದುವೆ ವಿದ್ಯಾ ಸಂಸ್ಥೆಯ ಶಿಕ್ಷಕಿ ಶಕೀಲ ಮೊದಲಾದವರು ಉಪಸ್ಥಿತರಿದ್ದರು