-->
ಶಾಲಾಡಳಿತವು ಶಿಕ್ಷಣದೊಂದಿಗೆ ಕೈ ಜೋಡಿಸಿದಾಗ ಯಶಸ್ಸು ಸಾಧ್ಯ - ಡಿಡಿಪಿಐ ಶಶಿಧರ್

ಶಾಲಾಡಳಿತವು ಶಿಕ್ಷಣದೊಂದಿಗೆ ಕೈ ಜೋಡಿಸಿದಾಗ ಯಶಸ್ಸು ಸಾಧ್ಯ - ಡಿಡಿಪಿಐ ಶಶಿಧರ್


ಶಾಲಾಡಾಳಿತವು ಶಿಕ್ಷಣದೊಂದಿಗೆ ಕೈ ಜೋಡಿಸಿದಾಗ ಯಶಸ್ಸು ಸಾಧ್ಯ ಶಶಿಧರ್ ಡಿ. ಡಿ. ಪಿ. ಐ. 

ಸರಕಾರವು ಇಂದು ಸರಕಾರಿ ಶಾಲೆಗಳ ಎಲ್ಲಾ ವ್ಯವಸ್ಥೆಗಳೊಂದಿಗೆ ಉತ್ತಮವಾದ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ತನ್ನ ಕನ್ನಡ ಮಾಧ್ಯಮ ಶಾಲೆಗಳಿಗೆ ಬಹಳಷ್ಟು ವ್ಯವಸ್ಥೆಯನ್ನು ಮಾಡುವುದು ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಶಶಿಧರ್ ರವರು  ಹೇಳಿದರು. ಅವರು ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೇಕೋಟೆಯಲ್ಲಿ ನಡೆಸಲ್ಪಾಡುತಿರುವ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯದ್ ಮದನಿ ಪ್ರೌಢ ಶಾಲೆಗಳ ವಾರ್ಷಿಕೋತ್ಸವದ ಮುಖ್ಯ ಶಿಕ್ಷರಾಗಿ ಮಾತನಾಡುತ್ತಾ ಈ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಉಚಿತ ಬಸ್ಸಿನ ವ್ಯವಸ್ಥೆ, ಉಚಿತ ಸಮವಸ್ತ್ರ ಹಾಗು ಇತರ ಶೈಕ್ಷಣಿಕ ಸಲಕರಣೆಯನ್ನು ಒದಗಿಸುವುದು ಶ್ಲಾಘನೀಯ ಎಂದರು. ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಜನಾಬ್ ಬಿ. ಜಿ. ಹನೀಫ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂದಲ್ಲಿ ಯುವ ಉದ್ಯಮಿ ಅಲೈನ್ಸ್ ಪ್ರಾಪರ್ಟಿಸ್ ಮಾಲಕರಾದ ಹನೀಫ್ ಮೈಸೂರ್, ದಕ್ಷಿಣ ಕನ್ನಡ ಜಿಲ್ಲಾ ಕುಲಾಲ ಯುವ ವೇದಿಕೆ ಅಧ್ಯಕ್ಷ ಅನಿಲ್ ದಾಸ್ ಉಪನಿರ್ದೇಶಕರಾದ ಶ್ರೀ ಶಶಿಧರ್ ರವರನ್ನು ಸನ್ಮಾನಿಸಲಾಯಿತು.

Ads on article

Advertise in articles 1

advertising articles 2

Advertise under the article