ಉಳ್ಳಾಲ ಹಳೆಕೋಟೆ ಶಾಲೆಯಲ್ಲಿ ಮಕ್ಕಳ ದಿನಾಚರಣೆ
Friday, November 14, 2025
ಹಳೆಕೋಟೆ ಸೈಯದ್ ಮದನಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಯ್ಯದ್ ಮದಿನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮದನಿ ಪ್ರೌಢಶಾಲೆ ಹಳೇ ಕೋಟೆ ಉಳ್ಳಾಲ ಇಲ್ಲಿ ಸ್ವತಂತ್ರ ಭಾರತದ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂರವರ ಜನ್ಮದಿನೋತ್ಸವವನ್ನು ಮಕ್ಕಳ ದಿನಾಚರಣೆಯನ್ನಾಗಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ಜನಾಬ್ ಇಸ್ಮಾಯಿಲ್ ಹಾಜಬ್ಬ ರವರು ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆಎಂ ಕೆ ಮಂಜನಾಡಿಯವರು ಪಂಡಿತ್ ಜವಾಹರಲಾಲ್ ನೆಹರು ರವರ ದೂರ ದೃಷ್ಟಿ, ಮಕ್ಕಳೊಂದಿಗೆ ಅವರಿಗಿದ್ದ ವಾತ್ಸಲ್ಯ, ಮತ್ತು ಸ್ವತಂತ್ರ ಭಾರತಕ್ಕೆ ಅವರು ನೀಡಿದ ಪಂಚವಾರ್ಷಿಕ ಯೋಜನೆಯ ಬಗ್ಗೆ ಮಕ್ಕಳಿಗೆ ತಿಳಿಸಿದರು. ಮಕ್ಕಳ ಮೇಲೆ ಅವರಿಗಿರುವ ಪ್ರೀತಿ ಮತ್ತು ಮಕ್ಕಳಿಗೆ ಅವರ ಮೇಲಿರುವ ಪ್ರೀತಿಯಿಂದಾಗಿ ಮಕ್ಕಳು ಅವರನ್ನು ಚಾಚಾ ನೆಹರು ಎಂದು ಕರೆಯುತ್ತಿದ್ದರು. ಅವರ ನಡೆ ನುಡಿ ಆಚಾರ ವಿಚಾರಗಳು ನಮಗೆ ಮಾರ್ಗದರ್ಶಕವಾಗಬೇಕು ಎಂದು ಹೇಳಿದರು. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ಜನಾಬ್ ಎಂ ಹೆಚ್ ಇಬ್ರಾಹಿಂ ರವರು ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ನೀಡಿದರು. ಶಿಕ್ಷಕಿಯರಾದ ಶ್ರೀಮತಿ ಶಶಿಕಲಾ ಮತ್ತು ಶ್ರೀಮತಿ ಸೌಮ್ಯರವರು ಮಕ್ಕಳಿಗೆ ಮಕ್ಕಳ ದಿನಾಚರಣೆತಸವಂದಿದರು