-->
ಪಾಠದೊಂದಿಗೆ ತಮ್ಮ ಪ್ರತಿಭೆಗಳನ್ನು ಬೆಳಗಿಸುವಂತಹ ವಿವಿಧ ಚಟುವಟಿಕೆಗಳಲ್ಲಿ  ಭಾಗವಹಿಸಿದಾಗ ಮಾತ್ರ ಸಕ್ರೀಯವಾಗಿ ತಮ್ಮ ಮುಂದಿನ ಜೀವನವನ್ನು ಕಟ್ಟಿ ಬೆಳಸಿಕೊಳ್ಳಲು ಸಾಧ್ಯ - ಹೆಚ್ ಅರ್ ಈಶ್ವರ

ಪಾಠದೊಂದಿಗೆ ತಮ್ಮ ಪ್ರತಿಭೆಗಳನ್ನು ಬೆಳಗಿಸುವಂತಹ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ಸಕ್ರೀಯವಾಗಿ ತಮ್ಮ ಮುಂದಿನ ಜೀವನವನ್ನು ಕಟ್ಟಿ ಬೆಳಸಿಕೊಳ್ಳಲು ಸಾಧ್ಯ - ಹೆಚ್ ಅರ್ ಈಶ್ವರ

ಉಳ್ಳಾಲ ಕ್ಲಸ್ಟರ್ ನಲ್ಲಿ ಪ್ರತಿಭಾ ಕಾರಂಜಿ 2025        ವಿದ್ಯಾರ್ಥಿಗಳು ಪಾಠದೊಂದಿಗೆ ತಮ್ಮ ಪ್ರತಿಭೆಯನ್ನು ಬೆಳಗಿಸುವಂಥ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ಸಕ್ರಿಯವಾಗಿ ತಮ್ಮ ಮುಂದಿನ ಜೀವನವನ್ನ ಕಟ್ಟಿ ಬೆಳೆಸಿಕೊಳ್ಳಲಿಕ್ಕಾಗುತ್ತದೆ ಎಂದು ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಆರ್ ಈಶ್ವರರವರು ಹೇಳಿದರು. 



ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಮತ್ತು ಗುಚ್ಛ ಸಂಪನ್ಮೂಲ ಕೇಂದ್ರ ಉಳ್ಳಾಲ ಅನುದಾನಿತ ಬಿಎಂ ಹಿರಿಯ ಪ್ರಾಥಮಿಕ ಶಾಲೆ ಯ ಸಹಯೋಗದಲ್ಲಿ ಉಳ್ಳಾಲದಲ್ಲಿ ಆಯೋಜಿಸಿದ  ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಕರು ಇಂದಿನ ಒತ್ತಡದ ನಡುವೆಯೂ ವಿದ್ಯಾರ್ಥಿಗಳನ್ನು ಪಾಠ ಮತ್ತು ಪಾಠೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುವ ಪ್ರೇರಣೆಯನ್ನು ನೀಡುತ್ತಿರುವುದು ಶ್ಲಾಘನಿಯ ಎಂದರು. 




ಬಿ ಎಂ ವಿದ್ಯಾ ಸಂಸ್ಥೆಯ ಸಂಚಾಲಕರಾದ ಎಸ್ ಎಸ್ ಸಾಲಿನ್ಸ್  ರವರ  ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಿ ಆರ್ ಪಿ ಗಳಾದ ತಹಸಿನ ಬೇಗಂ, ವಿಲ್ಮಾ, ಸಿಆರ್‌ಪಿಗಳಾದ ವಿಲ್ಮಾ, ಮಗಧೀರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪಾವನ, ಟಿಪ್ಪು ಸುಲ್ತಾನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ ಶೆಟ್ಟಿ, ಬಿ ಎಂ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯವಂತಿ ಮೊದಲಾದವರು ಉಪಸ್ಥಿತರಿದ್ದರು.



 ಉಳ್ಳಾಲ ಮುಖ್ಯ ಸಂಪನ್ಮೂಲ ವ್ಯಕ್ತಿ ಶ್ರೀಯುತ ಮೋಹನ್ ಕುಮಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆಕೋಟೆ ಸೈಯದ್ ಮದನಿ ವಿದ್ಯಾ ಸಂಸ್ಥೆಗಳ ಮುಖ್ಯ ಶಿಕ್ಷಕರಾದ ಶ್ರೀಯುತ ಕೆಎಂ ಕೆ ಮಂಜನಾಡಿ ಸ್ವಾಗತಿಸಿದರು. ಬಿಎಂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹಿಲ್ದಾ ಹೆರೋಜ ಅವರು ಧನ್ಯವಾದವಿತರು. ಟಿಪ್ಪು ಸುಲ್ತಾನ್ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಬಿ.ಎಂ. ರಫೀಕ್ ತುಂಬೆ ರವರು ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article