ಮಕ್ಕಳ ಪ್ರತಿಭೆಯನ್ನು ನೋಡುವುದೇ ಮನಸ್ಸಿಗೆ ಮುದ - ಉಳ್ಳಾಲ ಸಂಭ್ರಮದ ಪ್ರತಿಭಾ ಕಾರಂಜಿ ಸಮಾರೋಪ ಸಮಾರಂಭದ ಲ್ಲಿ ಸ್ಪೀಕರ್ ಯು.ಟಿ.ಖಾದರ್ ಅಭಿಮತ
Friday, August 30, 2024
ಅವರು ಉಳ್ಳಾಲ ಒಂಬತ್ತು ಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಳ್ಳಾಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2024 ಸಮಾರೋಪ ಸಮಾರಂಭದ ಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ.ಕಾದರ್ ರವರು ಮಾತಾಡುತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಈಶ್ವರ್ ಕ್ಷೇತ್ರ ಸಮನ್ವಯಾಧಿಕಾರಿ ಸುಷ್ಮಾ, ಶಿಕ್ಷಣ ಸಂಯೋಜಕಿ ಅನ್ನಪೂರ್ಣ ಬಚ್ಚನ್ ಕೆ ಎಂ ಕೆ ಮಂಜನಾಡಿ, ಸಿ ಆರ್ ಪಿ ಗಳಾದ ಮೋಹನ್ ಕುಮಾರ್, ಹರೀಶ್, ಬಿ ಆರ್ ಪಿ ತಹಸೀನ ಉಪಸ್ಥಿತರಿದ್ದ ಈ ಪ್ರತಿಭಾ ಕಾರಂಜಿ ಸಮಾರೋಪ ಸಮಾರಂಭದ ದ ಅದ್ಯಕ್ಷತೆಯನ್ನು ಉಳ್ಳಾಲ ನಗರಸಭೆಯ ಕೌನ್ಸಿಲರ್ ಹಾಗು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾದ ಇಬ್ರಾಹಿಂ ಅಶ್ರಫ್ ರವರು ವಹಿಸಿದ್ದರು
ಶಾಲೆಗೆ ಬೇಕಾದ ಸವಲತ್ತುಗಳನ್ನು ನೀಡಿದ ದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಎಂ ಎಫ್ ಸಿ ಅಧ್ಯಕ್ಷರಾದ ಅಬ್ದುಲ್ ರಝಾಕ್ , ಸಿಯಾಬ್ ಟ್ರೇಡಿಂಗ್ ಕಾಪೋರೇಶನ್ ಮಾಲಕರಾದ ಹಾಜಿ ಅಬ್ದುಲ್ ಖಾದರ್, ಎಂಎಫ್ಸಿ ಉಪಾಧ್ಯಕ್ಷ ರಾದ ಅಬೂಬಕ್ಕರ್, ಎಂಎಫ್ಸಿ ಸದಸ್ಯರಾದ ಅಬ್ದುಲ್ ರವೂಫ್, ಮನ್ಸೂರ್, ಆಸೀಫ್ ಝಿಯಾದ್ ,ಅಮೀರ್,ಸಲಾಂ, ರಾಯಿಝ್, ಎಂ ಎಪ್ ಸಿ ಕಾರ್ಯದರ್ಶಿ ಇಸ್ಮಾಯಿಲ್ ಝಿಯಾದ್, ಕ್ರಿಯಾ ಸಮಿತಿ ಅಧ್ಯಕ್ಷ ಮಾರಪ್ಪ ಎಸ್ ಡಿ ಎಂ ಸಿ ಸದಸ್ಯರಾದ ಆಸೀಫ್ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ಸ್ವಾಗತಿಸಿದರು
ಚಿತ್ರಕಲಾ ಶಿಕ್ಷಕ ಬಿ.ಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.