ಬೆಳರಿಂಗೆಯಲ್ಲಿ ತಲಪಾಡಿ ಕ್ಲಸ್ಟರ್ ಪ್ರತಿಭಾ ಕಾರಂಜಿ 2024 ರ ಸಂಭ್ರಮ
Thursday, August 29, 2024
ಉಳ್ಳಾಲ ತಾಲೂಕಿನ ತಲಪಾಡಿ ಕ್ಲಸ್ಟರ್ ಪ್ರತಿಭಾ ಕಾರಂಜಿ ಬೆಳರಿಂಗೆ ಸರಕಾರಿ ಶಾಲೆಯಲ್ಲಿ ನಡೆಯಿತು
ಪ್ರತಿಭಾ ಕಾರಂಜಿಗಳು ನಡೆಯುವುದರಿಂದ ಮಕ್ಕಳ ಪ್ರತಿಭೆಯು ಇನ್ನಷ್ಟೂ ಬೆಳಗಳು ಸಾಧ್ಯ ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ಫಾರೂಕ್ ಕಿನ್ಯಾ ಅಭಿಪ್ರಾಯ ನೀಡಿದರು.
ಮಂಗಳೂರು ದಕ್ಷಿಣ ವಲಯದ ಪ್ರಬಾರ ಕ್ಷೇತ್ರ ಸಮನ್ವಯಧಿಕಾರಿ ಸುಷ್ಮಾ ರವರು ಪ್ರಾಸ್ತಾವಿಕ ಮಾತಾಡಿದರು.
ಗ್ರಾಮ ಪಂಚಾಯತ್ ಅದ್ಯಕ್ಚರಾದ ಶ್ರೀಮತಿ ಮಾಲಿನಿ,
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ತುಳಸಿ, ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ರಾದ ಇಸ್ಮಾಯಿಲ್ ಕಿನ್ಯಾ,ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾದ ಅಬ್ಬಾಸ್, ಎಸ್ ಡಿ ಎಂ ಸಿ ಅಧ್ಯಕ್ಷ ರಾದ ಮೊಹಮ್ಮದ್ ಫಝಲ್, ಉಪಾದ್ಯಕ್ಷರಾದ ಅನೀಸಾ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನವಾಝ್ ಅಲೀಸ್,ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಬಿ.ಎಂ.ರಫೀಕ್ ತುಂಬೆ, ಅಲೀಸ್, ಶುಭ ಕುಮಾರಿ ಸಿ ಆರ್ ಪಿ ಗಳಾದ ಹರೀಶ್ ಕುಮಾರ್, ಮೋಹನ್ ಕುಮಾರ್, ಪಂಚಾಯತ್ ಸದಸ್ಯರಾದ ಬಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ಶುಭ ಕುಮಾರಿ ಸ್ವಾಗತ ನೀಡಿದರು
ಸಹ ಶಿಕ್ಷಕ ಶರತ್ ಕುಮಾರವರು ಕಾರ್ಯಕ್ರಮ ನಿರೂಪಿಸಿದರು.
ಸಹಶಿಕ್ಷಕ ದಿನೇಶ್ ವಂದಿಸಿದರು.