ತಮಿಳುನಾಡಿನ ಚೆನ್ನೈ ಯಲ್ಲಿ ನಡೆದ ರಾಷ್ಟ್ರ ಮಟ್ಟದ ಎತ್ತರ ಜಿಗಿತದಲ್ಲಿ ತಲಪಾಡಿಯ ಸನಾ ದ್ವಿತೀಯ ಸ್ಥಾನ
Monday, July 29, 2024
HCL foundations -sports for change -2024 ಸಂಸ್ಥೆಯ ವತಿಯಿಂದ ತಮಿಳುನಾಡಿನ ಚೆನ್ನೈ ನಲ್ಲಿ
ಜರುಗಿದ ರಾಷ್ಟ್ರಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಫಾತಿಮಾ ಸನ ಇವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.
2023-24 ನೇ ಸಾಲಿನಲ್ಲಿ ಸರಕಾರಿ ಪ್ರಾಥಮಿಕ ಶಾಲೆ ತಲಪಾಡಿಯಲ್ಲಿ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದ ಇವಳಿಗೆ ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಪ್ರಪುಲ್ಲಾ ಇವರು ತರಬೇತಿಯನ್ನು ನೀಡಿರುತ್ತಾರೆ. ಪಟ್ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ಶಿಕ್ಷಕರು ಅವಳನ್ನು ಗೌರವಿಸಿ ಅಭಿನಂದಿಸಿದರು.
ಪ್ರಸ್ತುತ ಫಾತಿಮಾ ಸನಾಳು ಉಚ್ಚಿಲ ಸರಕಾರಿ ಫ್ರೌಡ ಶಾಲೆಯಲ್ಲಿ ಕಲಿಯುತ್ತಿದ್ದಾಳೆ.
ಮಕ್ಕಳ ಜೋಳಿಗೆ ಯು ಫಾತಿಮಾ ಸನಾ ರನ್ನು ಆಬಿನಂದಿಸುತ್ತದೆ