-->
ಪ್ರಕೃತಿಯು ನಮಗಾಗಿ ನೀಡಿದ ವರದಾನವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ - ಬಿ.ಜಿ.ಹನೀಫ್ ಹಾಜಿ

ಪ್ರಕೃತಿಯು ನಮಗಾಗಿ ನೀಡಿದ ವರದಾನವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ - ಬಿ.ಜಿ.ಹನೀಫ್ ಹಾಜಿ




ಪ್ರಕೃತಿಯು ನಮಗಾಗಿ ಕೊಟ್ಟ ವರದಾನವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ - ಬಿ ಜಿ ಹನೀಫ್ ಹಾಜಿ

 ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವನಮಹೋತ್ಸವ, ಶಾಲಾ ವಿದ್ಯಾರ್ಥಿ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ದ ಅಧ್ಯಕ್ಷ  ಸ್ಥಾನದಿಂದ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾದ ಜನಾಬ್ ಬಿ.ಜಿ.ಹನೀಫ್ ಹಾಜಿ   ಮಾತಾಡಿದರು.


ಅವರು ಶಾಲಾ ಅಕ್ಷರ ಕೈತೋಟದಲ್ಲಿ ಗಿಡ ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿದರು

ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿ ಗಳ ಭವಿಷ್ಯದ ಹಾದಿಯಲ್ಲಿ ಸಹಕಾರಿ ಎಂದು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯ ರಾದ ಯು ಹೆಚ್ ಫಾರೂಕ್ ರವರು 
ವಿದ್ಯಾರ್ಥಿ ಸಂಸತ್ತಿಗೆ ಮಂತ್ರಿಗಳಾಗಿ ಆಯ್ಕೆಯಾದವರಿಗೆ ಅಭಿನಂದನಾ ಪಟ್ಟಿಯನ್ನು ತೊಡಿಸುವುದರ ಮೂಲಕ ವಿದ್ಯಾರ್ಥಿ ಗಳನ್ನು  ಗೌರವಿಸುತ್ತಾ ಮಾತಾಡಿದರು


ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಕೋರ್ಡಿನೇಟರಾದ ಹಾಜಿ ಎಂ ಹೆಚ್ ಮಲಾರ್ ರವರು ವಿವಿಧ ಸಂಘಗಳ ಅಧ್ಯಕ್ಷ ರುಗಳಿಗೆ ಸಂಘದ ನಾಮಫಲಕಗಳನ್ನು ನೀಡುವುದರ ಮೂಲಕ ವಿವಿಧ ಸಂಘಗಳನ್ನು ಉದ್ಘಾಟಿಸಿದರು


ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ರಾದ ಅಬ್ದುಲ್ ಜಬ್ಬಾರ್, ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್, ಉಳ್ಳಾಲ ಕೇಂದ್ರ ಜುಮಾ ಮಸೀದಿ ಯ ಸದಸ್ಯರಾದ ರಫೀಕ್ ಕೋಡಿ, ಅಬೂಬಕ್ಕರ್ ಕೋಟೆಪುರ ಜುಮಾ ಮಸೀದಿ ಯ ಅಧ್ಯಕ್ಷ ರಾದ ಯು.ಕೆ ಅಬ್ಬಾಸ್  ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶಾಲಾ ಮುಖ್ಯಶಿಕ್ಷಕಿ ಗೀತಾ ಡಿ ಶೆಟ್ಟಿ ಯವರು ಪ್ರಾಸ್ತಾವಿಕವಾಗಿ ಮಾತಾಡಿದರು. ಮೊಹಮ್ಮದ್ ಫಾಝಿಲ್ ರವರು ಸ್ವಾಗತ ನೀಡಿದರು ಅಖಿಲ್ ರವರು ಧನ್ಯವಾದವಿತ್ತರು. ಬಿ ಎಂ ರಫೀಕ್ ತುಂಬೆ ಕಾರ್ಯಕ್ರಮ ನಿರೂಪಣೆ ಮಾಡಿದರು



Ads on article

Advertise in articles 1

advertising articles 2

Advertise under the article