
ನಿಖಿತಾ ಬರೆದ ಕವನ - ಶಿಕ್ಷಣ
Wednesday, July 24, 2024
ಶಿಕ್ಷಣ
********
ನಾಳಿನ ಭವಿಷ್ಯಕ್ಕಾಗಿ ಅಗತ್ಯವಿದೆ ಶಿಕ್ಷಣ.
ಎಂದು ಎಚ್ಚರಿಸಿತು ನನ್ನ ಮನ!
ಕಲಿಕೆಯ ಜೊತೆಗೆ ಕೂಡಿ ಆಡಿದೆವು ಪ್ರತಿಕ್ಷಣ.
ಖುಷಿಯಿಂದ ಶಾಲೆಗೆ ಹೋಗುತ್ತೇವೆ ಅನುದಿನ!
ಪಾಠ ಹೇಳುವ ಶಿಕ್ಷಕರ ಮೇಲೆ ಗೌರವದ ಜೊತೆಗೆ ಇರಲಿ ಕಿಂಚಿತ್ತು ಪ್ರೀತಿ.
ಶಿಕ್ಷಕರಲ್ಲಿರುವ ಸಲಿಗೆಗೂ ಇರಲಿ ಒಂದು ಮಿತಿ!
ಶಿಕ್ಷಣದೊಂದಿಗೆ ಹೇಳಿಕೊಡುವರು ಜೀವನದ ರೀತಿ-ನೀತಿ
ಇವೆಲ್ಲದರ ಮೂಲ ನನ್ನ ತರಗತಿ!
ಶಿಕ್ಷಣವೂ ಆಗದಿರಲಿ ಯಾರೋ ಕೊಟ್ಟ ಭಿಕ್ಷೆ.
ಪಾಠ ಕೇಳುವ ಕೋಣೆಯೇ ನಮಗೆಲ್ಲರಿಗೂ ಕಕ್ಷೆ!
ಶಿಕ್ಷಣವನ್ನು ಪ್ರೀತಿಯಿಂದ ಕಲಿಯಬೇಕು ವಿನಃ ಆಗಬಾರದು ನಮಗೆಂದಿಗೂ ಶಿಕ್ಷೆ.
ಶಿಕ್ಷಣವೇ ನಮ್ಮ ಭವಿಷ್ಯದ ಕನಸನ್ನು ನನಸಾಗಿಸುವ ರಕ್ಷೆ!
ನಾಳಿನ ಭವಿಷ್ಯಕ್ಕಾಗಿ ಅಗತ್ಯವಿದೆ ಶಿಕ್ಷಣ.
ಎಂದು ಎಚ್ಚರಿಸಿತು ನನ್ನ ಮನ!
ಕಲಿಕೆಯ ಜೊತೆಗೆ ಕೂಡಿ ಆಡಿದೆವು ಪ್ರತಿಕ್ಷಣ.
ಖುಷಿಯಿಂದ ಶಾಲೆಗೆ ಹೋಗುತ್ತೇವೆ ಅನುದಿನ!
ಪಾಠ ಹೇಳುವ ಶಿಕ್ಷಕರ ಮೇಲೆ ಗೌರವದ ಜೊತೆಗೆ ಇರಲಿ ಕಿಂಚಿತ್ತು ಪ್ರೀತಿ.
ಶಿಕ್ಷಕರಲ್ಲಿರುವ ಸಲಿಗೆಗೂ ಇರಲಿ ಒಂದು ಮಿತಿ!
ಶಿಕ್ಷಣದೊಂದಿಗೆ ಹೇಳಿಕೊಡುವರು ಜೀವನದ ರೀತಿ-ನೀತಿ
ಇವೆಲ್ಲದರ ಮೂಲ ನನ್ನ ತರಗತಿ!
ಶಿಕ್ಷಣವೂ ಆಗದಿರಲಿ ಯಾರೋ ಕೊಟ್ಟ ಭಿಕ್ಷೆ.
ಪಾಠ ಕೇಳುವ ಕೋಣೆಯೇ ನಮಗೆಲ್ಲರಿಗೂ ಕಕ್ಷೆ!
ಶಿಕ್ಷಣವನ್ನು ಪ್ರೀತಿಯಿಂದ ಕಲಿಯಬೇಕು ವಿನಃ ಆಗಬಾರದು ನಮಗೆಂದಿಗೂ ಶಿಕ್ಷೆ.
ಶಿಕ್ಷಣವೇ ನಮ್ಮ ಭವಿಷ್ಯದ ಕನಸನ್ನು ನನಸಾಗಿಸುವ ರಕ್ಷೆ
ನಿಖಿತಾ
10ನೇ 'ಎ' ವಿಭಾಗ
ಕೆ. ಪಿ ಎಸ್ ಕೆಯ್ಯುರು
ಪುತ್ತೂರು ತಾಲ್ಲೂಕು
ದ. ಕ