ಶಿಕ್ಷಕರ ಸಂಘಟನೆಯು ಶಿಕ್ಷಕರಿಗೆ ಮಾನಸಿಕ ಧೈರ್ಯ ತುಂಬುವಂತಿರಬೇಕು - ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆಎಂಕೆ ಮಂಜನಾಡಿ
Wednesday, July 24, 2024
ಶಿಕ್ಷಕರ ಸಂಘಟನೆಯು ಶಿಕ್ಷಕರಿಗೆ ಮಾನಸಿಕ ಧೈರ್ಯ ತುಂಬುವಂತಿರಬೇಕು - ರಾಜ್ಯ ಉಪಾಧ್ಯಕ್ಷ ಕೆ ಎಂ ಕೆ ಮಂಜನಾಡಿ
ಶಿಕ್ಷಕರ ಸಂಘಟನೆಯು ತಳ ಮಟ್ಟದಿಂದಲೇ ಶಿಕ್ಷಕರಿಗೆ ಧೈರ್ಯವನ್ನು ತುಂಬುವಂತಿರಬೇಕು, ಅವರು ವಿದ್ಯಾರ್ಥಿಗಳೊಂದಿಗೆ ಮಾನಸಿಕವಾಗಿ ಸಂತುಷ್ಟರಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರಬೇಕು, ಶಿಕ್ಷಕರ ಸಂಘಟನೆಯು ಈ ಬಗ್ಗೆ ಇಲಾಖೆಯೊಂದಿಗೆ ಕೊಂಡಿಯಂತಿರಬೇಕು, ಅಧಿಕಾರಿಗಳ ಚೇಲರಾಗಿರದೆ ಶಿಕ್ಷಕರ ನ್ಯಾಯಯುತವಾದ ಬೇಡಿಕೆಗಳಿಗೆ ಸ್ಪಂದಿಸುತ್ತಿರಬೇಕು ಎಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ ಎಂ ಕೆ ಮಂಜನಾಡಿ ಅವರು ಹೇಳಿದರು.
ಮಂಗಳೂರು ಉತ್ತರ ವಲಯದ ಶಿಕ್ಷಕರ ಸಂಘಟನೆಯ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅವರು ಶಿಕ್ಷಕರ ನ್ಯಾಯಯುತವಾದಂತ ಬೇಡಿಕೆಗಳಲ್ಲಿ ಸ್ಪಂದಿಸುವುದು ಶಿಕ್ಷಕರ ಸಂಘದ ಕರ್ತವ್ಯ ಎಂದು ಹೇಳಿದರು. ಚುನಾವಣಾ ಅಧಿಕಾರಿಗಳಾಗಿ ಹಿರಿಯ ಶಿಕ್ಷಕ, ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸಂಘದ ಸಕ್ರಿಯ ಮಾರ್ಗದರ್ಶಕ ಶ್ರೀಯುತ ಸುಬ್ರಹ್ಮಣ್ಯ ರಾವ್ ರವರು ಕಾರ್ಯನಿರ್ವಹಿಸಿದರು. ಮಂಗಳೂರು ಉತ್ತರ ವಲಯಕ್ಕೆ ಶ್ರೀಯುತ ಅಂಬರೀಶ್ ಅಧ್ಯಕ್ಷರು, ಶ್ರೀಮಾನ್ ಸುಕುಮಾರ್ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ವನಿತಾ ಸುರೇಶ್ ಕೋಶಾಧಿಕಾರಿ, ಶ್ರೀಯುತ ಮಲ್ಲಕ್ಕಪ್ಪ ಉಪಾಧ್ಯಕ್ಷ ಶ್ರೀಮತಿ ಪೆಟ್ರಿ ಸಿಯಾ ಜತೆ ಕಾರ್ಯದರ್ಶಿ, ಶ್ರೀಮತಿ ನುಝಹ ತುನ್ನಿಸ, ಶ್ರೀಮತಿ ಹೆಲೆನ್ ಮೇರಿ, ಶ್ರೀಯುತ ಮಲ್ಲಿಕಾರ್ಜುನಯ್ಯ, ಶ್ರೀಮತಿ ಅಡ್ವಿನ್ ಫೆರಾವು ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುವರು