ಹಳೆಕೋಟೆ ಸಯ್ಯಿದ್ ಮದನಿ ವಿದ್ಯಾ ಸಂಸ್ಥೆ, ವಿದ್ಯಾರ್ಥಿ ಸಂಸತ್ತಿನ ನಾಯಕನಾಗಿ ಮುಹಮ್ಮದ್ ಆಪ್ತಾಬ್ ಆಯ್ಕೆ
Tuesday, July 2, 2024
ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮಾದನಿ ಪ್ರೌಢಶಾಲೆ ಹಳೆಕೋಟೆ ಉಳ್ಳಾಲ ಇಲ್ಲಿ 2024 - 25 ನೇ ಸಾಲಿನ ಶಾಲಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಶಾಲಾ ನಾಯಕನಾಗಿ ಮಹಮ್ಮದ್ ಅಫ್ತಾಬ್, ಉಪನಾಯಳಾ ಗಿ ಜೈನಬ ಫಾಹಿಮಾ ಆಯ್ಕೆಯಾಗಿದ್ದಾರೆ
ಮುಖ್ಯ ಚುನಾವಣಾಧಿಕಾರಿಯಾದ ಕೆ ಎಂ ಕೆ ಮಂಜನಾಡಿಯವರ ನಿರ್ದೇಶನ ದಂತೆ ಶಾಲಾ ಶಿಕ್ಷಕಿಯರು ಮತದಾನ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.
ವಿದ್ಯಾರ್ಥಿಗಳಿಗೆ ಇ ವಿ ಎಂ ಮೆಷಿನನ್ನು ಬಳಸುವ ಅರಿವು ಮೂಡಿಸುವುದರ ಸಲುವಾಗಿ ಈ ಚುನಾವಣೆಯಲ್ಲಿ ಮೊಬೈಲ್ ಇ ವಿ ಎಂ ಆ್ಯಪ್ ಬಳಸಿ ಚುಮಾವಣೆ ನಡೆಸಲಾಯಿತು.