-->
ಶಿಕ್ಷಕರ ಸಂಘಟನೆಯು ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಶಿಕ್ಷಕರಿಗೆ ನೈತಿಕ ಬಲವನ್ನು ನೀಡುತ್ತದೆ - ರಾಜ್ಯ ಉಪಾಧ್ಯಕ್ಷ ಕೆಎಂಕೆ ಮಂಜನಾಡಿ

ಶಿಕ್ಷಕರ ಸಂಘಟನೆಯು ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಶಿಕ್ಷಕರಿಗೆ ನೈತಿಕ ಬಲವನ್ನು ನೀಡುತ್ತದೆ - ರಾಜ್ಯ ಉಪಾಧ್ಯಕ್ಷ ಕೆಎಂಕೆ ಮಂಜನಾಡಿ




ಶಿಕ್ಷಕರ ಸಂಘಟನೆಯು ಸಮಸ್ಯೆಗಳೊಂದಿಗೆ ಸ್ಪಂದಿಸುವುದರೊಂದಿಗೆ  ಶಿಕ್ಷಕರಿಗೆ ನೈತಿಕ ಬಲವನ್ನು ನೀಡುತ್ತದೆ. ರಾಜ್ಯ ಉಪಾಧ್ಯಕ್ಷ ಕೆಎಂಕೆ ಮಂಜನಾಡಿ.



 ಶಿಕ್ಷಕರು ತಮ್ಮ ಕರ್ತವ್ಯದೊಂದಿಗೆ ತಮ್ಮ ಹಕ್ಕುಗಳನ್ನು ಪಡೆಯುವಂತೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಯುತ ಕೆಎಂ ಕೆ ಮಂಜನಾಡಿ ಅವರು ಕರೆ ನೀಡಿದರು. ಕರ್ನಾಟಕ ರಾಜ್ಯದಲ್ಲಿ ಇಂದು 18000 ಪ್ರಾಥಮಿಕ ಶಾಲಾ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದು ಶೈಕ್ಷಣಿಕವಾಗಿ ಮುಂದುವರಿಯಲು ಅನುದಾನಿತ ವಿದ್ಯಾಸಂಸ್ಥೆಗಳ ಕೊಡುಗೆ ಅಪಾರ ಎಂದು ಅವರು ತಿಳಿಸಿದರು.



 ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆದೇಶದಂತೆ  ಮೂಡಬಿದ್ರೆ ತಾಲೂಕು ವಲಯದ ಶಿಕ್ಷಕರ ಸಂಘದ ಚುನಾವಣೆಯ ಬಳಿಕ ಮಾತನಾಡಿದವರು  ಶಿಕ್ಷಕರು ಸಮುದಾಯ ಮತ್ತು ವಿದ್ಯಾರ್ಥಿಗಳ ನಡುವಿನ ಕೊಂಡಿ ಯಂತೆ ಕಾರ್ಯ ನಿರ್ವಹಿಸುತ್ತಾರೆ ಎಂದರು.
 ನಿರ್ಣಯದಂತೆ ಹಿರಿಯ ಶಿಕ್ಷಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರು ಆದ ಶ್ರೀಯುತ ಸುಬ್ರಮಣ್ಯರಾವ್ ರ ವರು ಚುನಾವಣಾ ಅಧಿಕಾರಿಯಾಗಿ ಭಾಗವಹಿಸಿದ್ದರು. 2024 ರಿಂದ 28ನೇ ಸಾಲಿನವರೆಗೆ ಶ್ರೀಯುತ ಶಶಿಕಾಂತ್ ಜೈನ್,ಅಧ್ಯಕ್ಷರು, ಶ್ರೀಮತಿ ಆಲ್ ಫೋನ್ಸ ಮೊಂತೆ ರೋ  ಪ್ರಧಾನ ಕಾರ್ಯದರ್ಶಿ,  ಶ್ರೀಮತಿ ಶಾಂತಿ ವಾಸ್ ಕೋಶಾಧಿಕಾರಿ, ಶ್ರೀಮತಿ ಪ್ರಸಿಲ್ಲ ನಿರೋಡಿ ಉಪಾಧ್ಯಕ್ಷರು, ಶ್ರೀ ಜರಾಲ್ಡ್ ಮಿರಂದ ಜತೆ ಕಾರ್ಯದರ್ಶಿ ಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಪ್ರಕಟಿಸಿದರು




Ads on article

Advertise in articles 1

advertising articles 2

Advertise under the article