ಸ್ಕೇಟಿಂಗ್ ನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿ 70 ಪದಕಗಳನ್ನು ಮುಡಿಗೇರಿಸಿಕೊಂಡ ಶ್ರದ್ಧಾ ಮಹೇಶ್
Saturday, July 13, 2024
ಮನ, ವಾಣಿ, ಕರ್ಮದಲ್ಲಿ ದೃಢತೆ ಇರಲಿ ಧೃಢತೆ ಮಾನವನನ್ನು ಸಾಧನೆಯ ಶಿಖರಕ್ಕೆ ಏರಿಸುತ್ತದೆ ಎಂಬ ಮಾತಿಗೆ ಬೆಂಗಳೂರಿನ ಶ್ರದ್ಧಾ ಮಹೇಶ್ ನಿದರ್ಶನ
ಶ್ರದ್ಧಾ ಎಂ, ಮೂಲತಹ ಕುಂಭಾಶಿವರಾಗಿದ್ದು, ಇವರ ತಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವುದರಿಂದ, ಇವರು ಬೆಂಗಳೂರಿನ ಬನ್ನೇರುಘಟ್ಟ ರೋಡ್ ಹುಳಿಮಾವಿನಲ್ಲಿ ವಾಸವಿರುತ್ತಾರೆ,
ನಾರಾಯಣ ಇ ಟೆಕ್ನೋ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿರುತ್ತಾರೆ ,ಇವರು ಐದು ವರ್ಷ ವಯಸ್ಸಿನಿಂದ ಸ್ಕೇಟಿಂಗ್ ಪ್ರಾಕ್ಟೀಸ್ ಆರಂಭಿಸಿರುತ್ತಾರೆ ,ಇದುವರೆಗೂ ಇಂಟರ್ ಸ್ಕೂಲ್ ಕಾಂಪಿಟೇಶನ್ ನಲ್ಲಿ ಸುಮಾರು 70 ಪದಕಗಳನ್ನು ಪಡೆದುಕೊಂಡಿರುತ್ತಾರೆ,ಹಾಗೆ
ಜಿಲ್ಲಾ ಮಟ್ಟದಲ್ಲಿ ಎರಡು ಬೆಳ್ಳಿಯ ಪದಕ ಹಾಗೂ ಮೂರು ಕಂಚಿನ ಪದಕವನ್ನು ಗಳಿಸಿರುತ್ತಾರೆ
ರಾಜ್ಯಮಟ್ಟದಲ್ಲಿ ಮೂರು ಚಿನ್ನದ ಪದಕ ಐದು ಬೆಳ್ಳಿಯ ಪದಕ ಪಡೆದಿರುತ್ತಾರೆ
ಹಾಗೆ ಪಂಜಾಬಿನಲ್ಲಿ ನಡೆದಂತಹ ನ್ಯಾಷನಲ್ ಕಾಂಪಿಟೇಶನ್ ನಲ್ಲಿ ಭಾಗವಹಿಸಿ ಸೆಮಿ ಫೈನಲ್ ಹಂತವನ್ನು ಪ್ರವೇಶಿಸುತ್ತಾರೆ,
ಇವರ ಕೋಚ್ ಹೆಸರು ಶೇಕ್ ಅಬ್ದುಲ್
ಹಾಗೂ ನ್ಯಾಷನಲ್ ಕೋಚ್ ಜೇಮ್ಸ್ ಥಾಮಸ್
ಬೆಂಗಳೂರು ಬನ್ನೇರುಘಟ್ಟ ದ ನಿವಾಸಿ ಮಹೇಶ್ ಮತ್ತು ರೇವತಿ ದಂಪತಿಗಳ ಪುತ್ರಿಯಾದ ಶ್ರದ್ಧಾಳನ್ನು ದೂರದರ್ಶನ ಚಂದನ ಟಿವಿಯಲ್ಲಿ ಒಂದು ಕಾರ್ಯಕ್ರಮ ನಡೆಸಿರುತ್ತಾರೆ ಚಿನ್ನರ ಲೋಕ ಹಾಗೂ ಆಕಾಶವಾಣಿ ರೇಡಿಯೋ ಚಾನೆಲ್ ನಲ್ಲೂ ಇವರ ಇಂಟರ್ವ್ಯೂ ನಡೆದಿರುತ್ತದೆ.
ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿ ನಿಯನ್ನುಮಕ್ಕಳ ಜೋಳಿಗೆ ಯು ಅಭಿನಂದಿಸುತ್ತದೆ
Shradha Mahesh
5th std
Narayana e techno and Olymplad
BLR BGT 457
Hulimavu Bannerghatta road.