ಯೋಗವು ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ.- ಗೀತಾ ಡಿ ಶೆಟ್ಟಿ
Friday, June 21, 2024
*ಯೋಗವು ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ.*
ಎಂದು ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆ ಯ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ ಡಿ ಶೆಟ್ಟಿ ಯವರು ಶಾಲಾ ವಿದ್ಯಾರ್ಥಿ ಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಅವರು ಯೋಗ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಯೋಗವು ಮನಷ್ಯನ ಆರೋಗ್ಯ ಸುಧಾರಣೆಗೆ ಅತ್ಯುತ್ತಮ ಔಷದಿ. ಭಾರತೀಯ ಸಮಯದಲ್ಲಿ ಅಭಿವೃದ್ಧಿ ಹೊಂದಿದ ವ್ಯಾಯಾಮದ ಹಳೆಯ ವಿಧಾನವಾಗಿದೆ ಅಲ್ಲದೆ, ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಳೆಯಾಗಿದೆ
ದೈಹಿಕ ಶಿಕ್ಷಣ ಶಿಕ್ಷಕರಾದ ಅಲ್ಲಾ ಭಕ್ಷ್ ಅಲಗೂರ್ ಹಾಗೂ ವಿಜ್ಞಾನ ಶಿಕ್ಷಕರಾದ ಈಶ್ವರ್ ಮೂಲ್ಯ ಯೋಗ ತರಗತಿಗಳನ್ನು ನಡೆಸಿಕೊಟ್ಟರು.
ಸಂಸ್ಥೆಯ ಎಲ್ಲಾ ಸಿಬಂದಿಗಳು ಕಾರ್ಯಕ್ರಮ ದಲ್ಲಿ ಭಾಗವಹಿದ್ದರು.
ಬಿ ಎಂ ರಫೀಕ್ ತುಂಬೆ ಕಾರ್ಯಕ್ರಮ ನಿರ್ವಹಿಸಿದರು.