
ದೀಪ್ತಿ ಕೆ ಎಸ್ ರವರು ಬರೆದ ಕವನ - ಪಾರ್ಥ ಸಾರಥಿ
Friday, October 6, 2023
*·٠•●ಪಾರ್ಥಸಾರಥಿ●•٠·*
ಕದ ತೆರೆದು ಕಾದಿಹೆನು ನಿನಗಾಗಿ ನಾ
ಎಂದು ಬರುವೆಯೋ ಓ..ನನ್ನ
ಕೃಷ್ಣ...?!
ಕ್ಷಣವೂ ಮಿಡಿಯುತಿಹುದು ನನ್ನೀ ಮನ
ಬೇರೆಡೆಗೆ ಸುಳಿಯಲಾರದು ಗಮನ!!
ಕಣಕಣದಲ್ಲೂ ನೀನೇ ಮಾರ್ದನಿಸುತ್ತಿರುವೆ
ಹಕ್ಕಿಗಳ ಕಲರವದಲ್ಲೂ ಪಸರಿಸಿರುವೆ
ಮಧುರ ಕೊಳಲಿನ ನಾದವು..
ಕೇಳಿದಾಕ್ಷಣ ಕಳೆದುಹೋಯಿತು ನನ್ನ ಅಂತರಂಗವೂ
ನಿನ್ನೆದೆಯಲ್ಲೇ ರಾಧೆಯ ವಾಸ
ಕದ್ದುಬಿಟ್ಟಿರುವೆಯಲ್ಲಾ ಅವಳ ಮನಸ...?!
ನವಿಲುಗರಿಯ ಬಣ್ಣಗಳ ಸೊಬಗು
ನಿನ್ನ ಅಂದಕ್ಕೆ ತುಂಬಿವೆ ಇನ್ನಷ್ಟು ಮೆರುಗು....!
ಈ ಧರೆಗೆ ನೀನೇ ಅಧಿಪತಿ
ಎಲ್ಲರನ್ನೂ ನಡೆಸೋ ಪಾರ್ಥಸಾರಥಿ...
ದೀಪ್ತಿ ಕೆ.ಸಿ
10ನೇ ತರಗತಿ
ಕೆ.ಪಿ.ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ