
ದೀಪ್ತಿ ಯವರು ಬರೆದ ಕವನ ಶಿಕ್ಷಕರಿಗಾಗಿ
Monday, September 4, 2023
*·٠•●ಗುರಿ ತೋರುವ ಗುರುವೇ●•٠·*
ಶಾಲೆ ಎಂಬ ಜ್ಞಾನಮಂದಿರ
ಅಲ್ಲಿ ಶಿಕ್ಷಕರೇ ನಮಗೆಲ್ಲಾ ಆಧಾರ
ಅವರು ಹೇಳಿಕೊಟ್ಟ ಪಾಠವನ್ನು ಮರೆಯಲು ಸಾಧ್ಯವಿಲ್ಲ
ಏಕೆಂದರೆ ಅದು ಅಷ್ಟೊಂದು ಅಮೂಲ್ಯ....!
ಹೆಜ್ಜೆ ಹೆಜ್ಜೆಯಲ್ಲೂ ಅಜ್ಞಾನವನ್ನು ಕಳೆಯುವುದೇ ಶಿಕ್ಷಣ
ಅದಕ್ಕಾಗಿ ಶ್ರಮಿಸಬೇಕು ನಾವು ಪ್ರತೀ ಕ್ಷಣ...
ಯಾವುದೇ ಕಾರ್ಯಕ್ಕೂ ಕೈಲಾದಷ್ಟು ಶ್ರಮವಹಿಸು
ನಂತರ ದೇವರ ಬಳಿ
ಒಳ್ಳೆಯ ಫಲಕ್ಕಾಗಿ ಪ್ರಾರ್ಥಿಸು
ತಂದೆ ತಾಯಿಯನ್ನು ಮೊದಲು ಗೌರವಿಸು
ಅವರ ಖುಷಿಯನ್ನೇ ನಿನ್ನ ಬಾಳಿನ ಗುರಿಯಾಗಿರಿಸು...
ಎಷ್ಟೇ ಕೆಲಸವಿದ್ದರೂ ಮನದಲ್ಲಿ ತಾಳ್ಮೆ ಇರಲಿ
ನಾನು ಮಾಡಿಯೇ ತೀರುತ್ತೇನೆ ಎಂಬ ಛಲವಿರಲಿ...
ಒಂಟಿಯಾಗಿದ್ದಾಗಲೇ ನಮ್ಮೊಳಗಿನ ಶಕ್ತಿಯ ಅರಿವಾಗುವುದು
ಇದನ್ನೆಲ್ಲಾ ತಿಳಿದವನೇ ಉತ್ತಮ ವಿದ್ಯಾರ್ಥಿಯಾಗುವುದು..!
ನಮಗೆಲ್ಲಾ ಜೀವನಪಾಠವನ್ನು ಕಲಿಸಿದ ಶಿಕ್ಷಕರ ದಿನಾಚರಣೆ ಇಂದು
ಆದರೆ ಅವರನ್ನು ವರ್ಣಿಸಲು ಪದಗಳೇ ಸಾಲದು....!
ದೀಪ್ತಿ ಕೆ.ಸಿ
10ನೇ ತರಗತಿ
ಕೆ.ಪಿ.ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ