-->
ದೀಕ್ಷಾ ಎಂ‌ ರವರು  ಶಿಕ್ಷಕರ ಕುರಿತು ಬರೆದ ಕವನ

ದೀಕ್ಷಾ ಎಂ‌ ರವರು ಶಿಕ್ಷಕರ ಕುರಿತು ಬರೆದ ಕವನ




ಶಿಕ್ಷಕರ ದಿನಾಚರಣೆ                         ಏನೆಂದು ಮಾಡಲಿ ಗುಣಗಾನ..        ನಿಮ್ಮ ಹಿತವಚನವಿರದ ಜೀವನವೇ ಅಪೂರ್ಣ...!                                    ಅಸಂಖ್ಯಾತ ಶಿಷ್ಯ ವೃಂದವು ನಿಮಗಿದೆ..                                      ಅದರಲ್ಲಿ ನಾನೊಂದು ಚುಕ್ಕೆ ಎಂದು ತಿಳಿದು ಸಂತುಷ್ಟಳಾದೆ...!                   ಎಲ್ಲರಿಗೂ ದಾರಿ ತೋರುವುದು ನೀವು ಕಲಿಸಿದ ಅಕ್ಷರದ ವರದಾನ...   ತನು ಮನ ಧನ ಕೊಟ್ಟರೂ ತೀರಿಸಲಾಗದು ನಿಮ್ಮ ಋಣ...!        ಪ್ರತಿಯೊಂದು ತಪ್ಪುಗಳನ್ನು ತಿದ್ದಿ ತೀಡಿರುವಿರಿ ನೀವು..                          ನಮ್ಮಲ್ಲಿ ಇಟ್ಟಿರುವ ಭರವಸೆಗೆ ಬೆಳಕಾಗುವೆವು ನಾವು..!                    ಪ್ರತಿ ಪ್ರಯತ್ನಗಳಿಗೂ ಬುನಾದಿ ನಿಮ್ಮ ಪ್ರೋತ್ಸಾಹ...                      ಇದರಿಂದ ಹೆಚ್ಚುತಿದೆ ನಮ್ಮ ಜೀವನೋತ್ಸಾಹ...!                           ನೀವು ಬಿತ್ತಿದ ಜ್ಞಾನದ ಜ್ಯೋತಿಯು ತುಂಬಿದೆ ಈ ಹೃದಯ ಮಂದಿರದಿ..      ಅದಕ್ಕಾಗಿ ನಿಮಗೊಂದು ನಮನ ಸಲ್ಲಿಸುವೆನು ಈ ಕವನದಿ...!


ದೀಕ್ಷಾ ಎಂ
ಕರ್ನಾಟಕದ ಪಬ್ಲಿಕ್ ಸ್ಕೂಲ್
ಕೆಯ್ಯೂರು

Ads on article

Advertise in articles 1

advertising articles 2

Advertise under the article