-->
ದೀಪ್ತಿ ಕೆ. ಸಿ‌ ಯವರು ಬರೆದ ಕವನ‌- ಅಕ್ಕ

ದೀಪ್ತಿ ಕೆ. ಸಿ‌ ಯವರು ಬರೆದ ಕವನ‌- ಅಕ್ಕ





*·٠•●ಅಕ್ಕ●•٠·*

ನಿನ್ನೊಂದಿಗೆ ನಾನು ಯಾವಾಗಲೂ ಜಗಳವಾಡುತ್ತಿರುವೆ
ಆದರೂ ನೀನು ನನ್ನ ನೆಚ್ಚಿನ ಅಕ್ಕನಾಗಿರುವೆ.....!

ನಿನ್ನಿಂದ ನಾನು ಕಲಿತಿರುವೆ ಸುಮಾರು ವಿಷಯ
ನೀನು ನನಗೆ ಯಾವಾಗಲೂ ನೀಡುವೆ ಅಭಯ

ಯಾವುದೇ ವಿಷಯದಲ್ಲೂ ನನಗಿರಲು ಉತ್ಸಾಹ
ಅದಕ್ಕೆ ಕಾರಣವೇ ನಿನ್ನ ಪ್ರೋತ್ಸಾಹ

ನಿನ್ನ ಬಗ್ಗೆ ಎಂದಿಗೂ ಪ್ರೀತಿ ಇರುತ್ತದೆ ನನ್ನ ಮನದಲ್ಲಿ
ಅದನ್ನು ಯಾವತ್ತೂ ತೋರಿಸಿಕೊಂಡಿಲ್ಲ ನಿನ್ನ ಎದುರಲ್ಲಿ.....!

ನಾನು ನಿನ್ನೊಂದಿಗೆ ಕಳೆಯುವ ಪ್ರತೀ ಕ್ಷಣವೂ
ಎಂದಿಗೂ ಮರೆಯಲಾಗದ ಅನುಭವವು.....!

ಯಾವತ್ತೂ ಹೀಗೇ ನಗು ನಗುತ್ತಿರಬೇಕು ನೀನು
ಅದನ್ನು ನೋಡುತ್ತಾ ಖುಷಿಪಡುವೆ ನಾನು


ದೀಪ್ತಿ ಕೆ.ಸಿ
10ನೇ ತರಗತಿ
ಕೆ.ಪಿ.ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ


Ads on article

Advertise in articles 1

advertising articles 2

Advertise under the article