ಜಯಲಕ್ಷ್ಮಿ ಜಿ ಕುಂಪಲ ರವರ ನ್ಯಾನೋ ಕಥೆ - ಫಲಿತಾಂಶ
Monday, March 6, 2023
ನ್ಯಾನೋ ಕಥೆ
ಫಲಿತಾಂಶ....🌹
ಲಕ್ಷ್ಮಿಗೆ ಪಿ. ಯು. ಸಿ ಆದ ತಕ್ಷಣ ಸರಕಾರಿ ಉದ್ಯೋಗ ಸಿಕ್ಕಿತು.ಜೊತೆಗೆ ಮದುವೆಯೂ ಆಯಿತು.ಆದರೆ ಆಕೆಗೆ ಡಿಗ್ರೀ ಮಾಡಬೇಕೆಂಬ ಹಂಬಲ ತುಂಬಾ ಇತ್ತು..ದೂರಶಿಕ್ಷಣ ಕೇಂದ್ರದ ಮೂಲಕ ಡಿಗ್ರೀ ಕಲಿಯಲು ಆರಂಭಿಸಿದಳು..ಕೆಲಸದ ಒತ್ತಡ, ಜೊತೆಗೆ ಒಂದು ವರುಷದ ಪುಟ್ಟ ಕಂದಮ್ಮ ಇವೆರಡನ್ನೂ ಸರಿದೂಗಿಸಿಕೊಂಡು ಪರೀಕ್ಷೆಗಾಗಿ ಓದುತ್ತಿದ್ದಳು..ಅಂತೂ ಕಷ್ಟಪಟ್ಟು ಓದಿ ಮೂರು ವರ್ಷದ ಡಿಗ್ರೀ ಮುಗಿಸಿದಳು...ಒಂದು ದಿನ ವಿಶ್ವವಿದ್ಯಾಲಯದದಿಂದ ಬಂದ ಪತ್ರವನ್ನು ನೋಡಿದಾಗ ಆಕೆ ಮೂಕ ವಿಸ್ಮಿತಳಾಗಿದ್ದಳು..ಆಕೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಬಂದಿದ್ದಳು ...ಆಕೆಯ ಶ್ರಮಕ್ಕೆ ತಕ್ಕ ಫಲಿತಾಂಶ ಸಿಕ್ಕಿತ್ತು....
ಜಯಲಕ್ಷ್ಮೀ ಜಿ ಕುಂಪಲ...
ಮಂಗಳೂರು....
🌹🌹🌹🌹🌹🌹🌹🌹🌹🌹🌹🌹🌹🌹