-->
ತಾಯಂದಿರ ದಿನ. ದ ಕವನ - ಜಯಲಕ್ಷ್ಮೀ ಜಿ ಕುಂಪಲ

ತಾಯಂದಿರ ದಿನ. ದ ಕವನ - ಜಯಲಕ್ಷ್ಮೀ ಜಿ ಕುಂಪಲ





🌸  ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು🌸

       🌹 Happy mother's day to all🌹
🌷🌷🌷🌷🌷🌷🌷🌷🌷🌷🌷🌷🌷🌷🌷🌷

       🌺ತಾಯಿಯ ಮಮತೆ 🌺

ನವಮಾಸದಿ ಉಸಿರನು ಬಿಗಿಹಿಡಿದು 
ತನ್ನೊಡಲ ಗುಡಿಯೆಂಬ ಬಸಿರೊಳು 
ಹೊತ್ತು ಹೆತ್ತು ನಿಡುಸುಯ್ಲು ಬಿಟ್ಟ 
ನಗುಮೊಗದ ಕರುಣಾಮಯಿಯೇ ಅಮ್ಮ 

ಕಂದನ  ಮೊಗದಲ್ಲಿನ ಮೊದಲ ಅಳು 
ಮೂಡಿಸಿತು ನಿನ್ನೀ ಹೃದಯದಲಿ ಸಂತಸದ ಹೊನಲು 
ಕಣ್ಮುಚ್ಚಿಕೊಂಡು ಬಂದ ಈ ಲೋಕದೊಳು
 ಹೊಸ ಜೀವನಕ್ಕೆ ಮುನ್ನುಡಿಯ ಬರೆದವಳೀಕೆ ಅಮ್ಮ 

ಬಾಲ್ಯದಿ ಕೈತುತ್ತು ತಿನಿಸಿ 
ಲಾಲಿ ಹಾಡಿ ಜೋಗುಳವ ತೂಗಿದಳೀಕೆ 
ತನ್ನ ತುತ್ತಿನ ಜೋಳಿಗೆ ಬರಿದಾದರೂ 
ಕಂದನ ನಗುವಿನಲಿ ಸುಂದರ ಕಲ್ಪನೆಗಳ ಕಂಡವಳೀಕೆ ಅಮ್ಮ

ಹರಿದ ಸೀರೆಯ ಸೆರಗಿನಂಚಿನಲಿ ಗಂಟು ಕಟ್ಟಿದ ಹೊನ್ನ....
 ಸ್ವಾರ್ಥವಿಲ್ಲದೆ ನೀಡಿ ಬದುಕು ಕಟ್ಟಲು ನೆರವಾಗುವಳೀಕೆ...
ತನ್ನೆಲ್ಲ ದುಃಖವಾ ತಾ ಮರೆತು 
ನಗುವಿನ ಮುಖವಾಡದಿ ನೋವು ಮರೆಯುವಳೀಕೆ ಅಮ್ಮ....

 ತನ್ನ ಕನಸುಗಳ ಬಸಿರಲ್ಲಿ ಹೊಸಕಿ 
ಹೊಸ ಕನಸೊಂದ ಮನದಲಿ ಬಿತ್ತುವಳೀಕೆ ...
ಸುಜ್ಞಾನದ ಬೆಳಕ ಹೊತ್ತಿ ಉರಿಸುತ
ಮನದ ಅಂಧಕಾರವ ತೊಲಗಿಸುವಳೀಕೆ ಅಮ್ಮ..

 ನೀನೊಂದು ಕಲ್ಪನೆಗೂ ನಿಲುಕದ ನಕ್ಷತ್ರ 
ಪ್ರೀತಿಯ ಅನುಬಂಧಗಳ ಅಳೆಯಲಾಗದ ಸಾಗರ
 ನಿನ್ನ ಪ್ರೀತಿಗೆ ಸರಿಸಮವಿಹುದೇ ಈ ಜಗದಲ್ಲಿ 
ನಿನ್ನೊಲುಮೆಗೆ ಸದಾ ಋಣಿಯಾಗಿರುವೆ ಬಾಳಲ್ಲಿ....

         _ ಜಯಲಕ್ಷ್ಮಿ ಜಿ (ವಿಜಯ ನಿಸರ್ಗ)
🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺

Ads on article

Advertise in articles 1

advertising articles 2

Advertise under the article