-->
ಜಲದಿನ ಮಾಚ್೯ -- 22 ,  ಇದರ ಕುರಿತಾಗಿ ಪ್ರತಿಮಾ ಹೆಬ್ಬಾರ್ ರವರ ಲೇಖನ

ಜಲದಿನ ಮಾಚ್೯ -- 22 , ಇದರ ಕುರಿತಾಗಿ ಪ್ರತಿಮಾ ಹೆಬ್ಬಾರ್ ರವರ ಲೇಖನ





ವಿಶ್ವ ಜಲದಿನಾಚರಣೆ
ಶುದ್ಧ ಕುಡಿಯುವ ನೀರು ಪ್ರತೀ ಜೀವಿಯ ಹಕ್ಕು. ನೀರು ನೈಸರ್ಗಿಕ ಮೂಲವಾದರೂ ಇತ್ತೀಚೆಗೆ ಸರಕಾಗಿ ಮಾರ್ಪಾಡು ಹೊಂದುತ್ತಿದೆ.
ಆದರೆ ನೀರು ಮರುಬಳಕೆ
 ಮಾಡುವಂತಹ ಸಂಪನ್ಮೂಲ. ಇದರ ಅರಿವನ್ನು ಯುವಜನತೆಗೆ ನೀಡಬೇಕಾಗಿದೆ.
 ನೀರು ಎಂಬುದು ಸಾರ್ವತ್ರಿಕ ದ್ರವ. ಇದು ನಮ್ಮ ಜೀವನದ ಎಲ್ಲ  ಸ್ತರ ಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಭಾರತದಲ್ಲಿ ಜಲಕ್ಕೆ ದೇವತಾ ಸ್ಥಾನ ನೀಡಲಾಗಿದೆ. ಕೇವಲ ಭೂಮಿ ಮಾತ್ರವೇ ನೀರನ್ನು ಹೊಂದಿರುವ ಗ್ರಹ.
ಇಂದಿನ ಮಕ್ಕಳಿಗೆ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಅತೀ ಅಗತ್ಯ . ಮಳೆಕೊಯ್ಲು ಪ್ರತೀ ಮನೆಗಳಲ್ಲಿ ನಡೆಯ ಬೇಕಾಗಿರುವ ತುರ್ತು ಕೆಲಸ. ಈಗಿನಿಂದಲೇ ನೀರನ್ನು ಉಳಿಸುವ ಕೆಲಸ ನಡಯಬೇಕಾಗಿದೆ. ಅಭಿವೃದ್ದಿ ಯ ಹೆಸರಿನಲ್ಲಿ ನಾವು ಕೆರೆಕಟ್ಟೆಗಳನ್ನು ಬರಿದಾಗಿಸಿ ಕಾಂಕ್ರೀಟ್ ಕಟ್ಟಡದ ನಿರ್ಮಾಣಕ್ಕೆ ಕಾರಣವಾದ ನಾವು ಇನ್ನಾದರೂ ಎಚ್ಚೆತ್ತಕೊಂಡು ನಮ್ಮ ಮುಂದಿನ ಪೀಳಿಗೆಯ  ಭವಿಷ್ಯ  ರೂಪಿಸಲು ಸಿದ್ದರಾಗೋಣ.


ಪ್ರತಿಮಾ‌ ಹೆಬ್ಬಾರ್

Ads on article

Advertise in articles 1

advertising articles 2

Advertise under the article