ವಿಶ್ವ ಅರಣ್ಯದಿನ ಮಾಚ್೯ 21 - ಪ್ರತಿಮಾ ಹೆಬ್ಬಾರ್
Sunday, March 20, 2022
ವಿಶ್ವ ಅರಣ್ಯ ದಿನ
ಮಾರ್ಚ್ 21 ವಿಶ್ವ ಅರಣ್ಯ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅರಣ್ಯ ಸಂಪತ್ತು ಜೀವರಾಶಿಗಳಿಗೆ ಅತಿ ಅಗತ್ಯ. ಇದರ ವಿನಾಶದಿಂದ ಪ್ರಕೃತಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. 1971 ರ ನವೆಂಬರದಲ್ಲಿ ವಿಶ್ವ ಅರಣ್ಯ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಲಾಗಿತ್ತು.
ಪ್ರಕೃತಿಯಲ್ಲಿನ ಕಾರ್ಬನ್ ಅಂಶವನ್ನು ತಗ್ಗಿಸಲು ಅರಣ್ಯಗಳು ಅತಿ ಅಗತ್ಯ.
ಆದರೆ ಮಾನವನ ದುರಾಸೆಯಿಂದಾಗಿ ಅರಣ್ಯಗಳು ನಶಿಸುತ್ತಿವೆ. ಅಭಿವೃದ್ಧಿಯ ನೆಪದಲ್ಲಿ ಸಾವಿರಾರು ಮರಗಳು ಧರೆಗುರುಳಿವೆ .ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ.
ಪ್ರಕೃತಿಯ ಸಮತೋಲನಕ್ಕಾಗಿ ಅರಣ್ಯಗಳನ್ನು ಉಳಿಸುವ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ಮುಖ್ಯ ಅಂಗವೇ ಅಂತರಾಷ್ಟ್ರೀಯ ಅರಣ್ಯ ದಿನಾಚರಣೆ. ಈ ದಿನ ನಮ್ಮ ಮುಂದಿನ ಜನಾಂಗಕ್ಕೆ ಅರಣ್ಯಗಳ ಮಹತ್ವ ಮತ್ತು ಅರಣ್ಯಗಳಿಂದಾಗುವ ಉಪಯೋಗ ಇತ್ಯಾದಿಗಳ ಮಾಹಿತಿಯನ್ನು ನೀಡುವುದು ಅಗತ್ಯವಾಗಿದೆ.
ನಮ್ಮ ವಿದ್ಯಾರ್ಥಿಗಳಿಗೆ ಗಿಡ ಮರಗಳ ಅಗತ್ಯತೆ ತಿಳಿಸಿ ಮುಂದಿನ ಪೀಳಿಗೆಗೆ ಅರಣ್ಯಗಳ ರಕ್ಷಣೆ ಹೇಗೆ ಎಂಬುದನ್ನು ತಿಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ
ಗಿಡ ಮರ ಬೆಳೆಸಿ ಪರಿಸರ ಉಳಿಸಿ"
ಪ್ರತಿಮಾ ಹೆಬ್ಬಾರ್