
ಸೃಷ್ಟಿ ಯ ಒಳಮರ್ಮ --- ಸುಮಂಗಲಾ ರವರ ಕವನ
Saturday, February 26, 2022
*ಶೀರ್ಷಿಕೆ : ಸೃಷ್ಟಿಯ ಒಳಮರ್ಮ “
ಸೃಷ್ಟಿಯ ಒಳಮರ್ಮವ ತಿಳಿದವರಾರು
ಜಗತ್ತಿನ ಆಗುಹೋಗುಗಳ ಬಲ್ಲವರಾರು
ನಿಗೂಢತೆಯ ರಹಸ್ಯವ ಅರಿತವರಾರು
ಪರಿಹಾರದ ದಾರಿಯ ಹುಡುಕುವವರಾರು……..
ಯೋಚನೆಗೂ ನಿಲುಕದ ವಿಷಯ ಸಾವಿರಾರು
ಮೂಲ ಹುಡುಕುತ್ತಾ ಹೊರಟರೆ ಸಿಗಲಾರದು
ಗೊಂದಲಮಯ ಜಗದಲಿರುವ ನಿಯಮವಿದು
ಸೃಷ್ಟಿ ಕರ್ತನ ಮಾಯ ಲೋಕದ ಬದುಕಿದು………
ನಗುನಗುತ ಅದರೊಳಗೆ ತನ್ನನ್ನೆ ಒಗ್ಗಿಸಿಬಿಡು
ಚಿಂತಿಸಿ ಬದಲಾಯಿಸಲಸಾಧ್ಯವೇ, ಬಿಟ್ಟು ಬಿಡು
ಪರಿವರ್ತನೆಯ ಬಯಸುತ ನೀ ಮುನ್ನುಗ್ಗಿದೊಡೆ
ಅಲ್ಲೋಲಕಲ್ಲೋಲವಾದೀತು ಈ ಸಂಸಾರದೊಡೆ………..
✒️ ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ