
ಶಂಸನಾ ರವರು ಬರೆದ ಕವನ
Saturday, February 26, 2022
ಶಕ್ತಿಯ ಚೆಂಡೇ ನೀನಾಗು
ಭಕ್ತಿಯ ನೆರಳಲಿ ನೀ ಸಾಗು
ಜೀವನ ನಾಟಕ ನೆನಪಿರಲಿ
ಬಾಳಿನ ಬೇಗುದಿ ಜತೆಗಿರಲಿ
ವೀರನು ಧೀರನು ಶೂರನು ನೀ
ಅಂಜಿಕೆ ಮೆಟ್ಟುತ ಮುನ್ನಡೆ ನೀ
ನಿಷ್ಠೆಯ ಪಾಠವ ಮರೆಯದಿರು
ಒಮ್ಮತದಾಸರೆ ಮರೆಯದಿರು
ಮನದಲಿ ನಾಮ ಬಲವಾಗಿರಲಿ
ಶೂನ್ಯಕೆ ಗಾನ ಹೊಮ್ಮುತ್ತ ಲಿರಲಿ
ಶರಣನೇ ಎಂದಿಗೂ ಅಂಜದಿರು
ಇಷ್ಟದ ದರುಶನ ಮರೆಯದಿರು
*************
ಶಂಶನಾ 10 ನೇ ತರಗತಿ
ಸರಕಾರಿ ಪ್ರೌಢಶಾಲೆ ಪದ್ಮುಂಜ
ಉಪ್ಪಿನಂಗಡಿ