
ಜಯಲಕ್ಷ್ಮಿ ಜಿ ಕುಂಪಲರವರು ಬರೆದ ಸಣ್ಣಕಥೆ - ಗುರು
Thursday, February 17, 2022
ನ್ಯಾನೋ ಕತೆ..... 🌹
"ಗುರು"
ಆಕೆಯ ಹೆಸರು ಲಕ್ಷ್ಮಿ... ಹೆಸರಿನಲ್ಲಿ ಮಾತ್ರ ಲಕ್ಷ್ಮಿ.... ಲಕ್ಷ್ಮಿಕಟಾಕ್ಷವಿಲ್ಲದ ಬಡ ಹುಡುಗಿ.. ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದರೂ ಮನೆಯ ಪರಿಸ್ಥಿತಿಯ ಅರಿವಿದ್ದ ಈಕೆ ಕಲಿತ ಹೈಸ್ಕೂಲ್ ನಲ್ಲಿಯೇ ಇರುವ ಕಾಲೇಜಿಗೆ ಸೇರಿದ್ದಳು ...ಏಕೆಂದರೆ ಆ ಕಾಲೇಜಿನಲ್ಲಿ ಯೂನಿಫಾರ್ಮ್ ಹಾಕುವುದು ಕಡ್ಡಾಯವಾಗಿತ್ತು..
ಕಾಲೇಜು ಡೇಯ ದಿನ ಎಲ್ಲರೂ ಬಣ್ಣದ ವಸ್ತ್ರ ಹಾಕಿ ಹೋಗಬೇಕಾಗಿತ್ತು.... ಲಕ್ಷ್ಮಿ ಒಂದು ವಾರದಿಂದ ತರಗತಿಯಲ್ಲಿ ಮಂಕಾಗಿ ಕುಳಿತಿದ್ದಳು....ಇದನ್ನು ಗಮನಿಸಿದ ಕನ್ನಡ ಲೆಕ್ಚರ್ ಜಯ ಮೇಡಂ ಕಾರಣ ತಿಳಿದು ಹೊಸ ಬಟ್ಟೆ ತೆಗೆದು ಕೊಟ್ಟರು.. ಕಾಲೇಜು ಡೇಯ ದಿನ ಹೊಸ ಬಟ್ಟೆ ಧರಿಸಿ ಸ್ಟೇಜ್ ನಲ್ಲಿ ಬಹುಮಾನ ತೆಗೆದುಕೊಳ್ಳುತ್ತಿರುವ ಲಕ್ಷ್ಮಿಯನ್ನು ನೋಡಿದ ಮೇಡಂ ಕಣ್ಣಿನಲ್ಲಿ ಆನಂದ ಭಾಷ್ಪ ಸುರಿಯಲಾರಂಭಿಸಿತು.....
ಜಯಲಕ್ಷ್ಮಿ ಜಿ ಕುಂಪಲ
ಸರಕಾರಿ ಪ್ರೌಢಶಾಲೆ ಕಲ್ಲರಕೋಡಿ