-->
ಜಯಲಕ್ಷ್ಮಿ ಜಿ ಕುಂಪಲ ರವರ ಕವನ

ಜಯಲಕ್ಷ್ಮಿ ಜಿ ಕುಂಪಲ ರವರ ಕವನ



ಹತ್ತಿರದ ಸಂಬಂಧ ದೂರವಾದಾಗ🌷🌷

ಸಂಬಂಧಗಳೆಂಬ  ಬೆಸುಗೆಯಿದು ಬಿಡಿಸಲಾಗದ ಬಂಧನ
ಸಾವಿರ ಭರವಸೆಗಳನು ಬಾಳಿಗೆ ತುಂಬುವ  ಸಾಧನ
ನೂರಾರು ನೆನಪುಗಳು  ಸಿಹಿಕಹಿಗಳ ಸರಮಾಲೆಯು
ಬಂಧಿಸಿಹುದು  ಪ್ರೀತಿ-ಸ್ನೇಹಗಳ ಸಂಕೋಲೆಯು

ಮನದ  ಮೂಲೆಯಲಿ  ಮೂಡಿಹ  ಸಂಶಯ
ಮಾಲ್ಪುದು ಬಂಧನಗಳ ಕೊಂಡಿಯ ಮಂಗಮಾಯ
ಹತ್ತಿರ ಸಂಬಂಧ ದೂರವಾಗೆ ಕೊರಗುವುದರಲ್ಲೇನಿದೆ ಅತಿಶಯ 
ಮೌನ ರೋಧನ  ನಿತ್ಯ ಕಣ್ಣೀರು ತುಂಬುವುದು , ಕಣ್ಣಾಲಿಯ

 ಹಳೆಯ ನೆನಪುಗಳ  ಅನುಕ್ಷಣ ನೆನೆಯುವಾ  ಶಿಕ್ಷೆಯು
 ಅರಿವಿಲ್ಲದ ತಪ್ಪಿಗೆ ಯಾತನೆ ಅನುಭವಿಸುವ ಪರಿಸ್ಥಿತಿಯು ಅಹಂಕಾರವ  ಮುರಿದು  ಸಂಬಂಧಗಳ  ಬೆಸೆಯಲು
 ಜೀವನವಾಗುವುದು  ಅನುದಿನ  ಹರುಷದ  ಹೊನಲು

      _ ಜಯಲಕ್ಷ್ಮೀ ಜಿ ಕುಂಪಲ(ವಿಜಯ ನಿಸರ್ಗ)




Ads on article

Advertise in articles 1

advertising articles 2

Advertise under the article