ಸ್ವಾತಂತ್ರ್ಯೋತ್ಸವದ ದ್ವಜಾರೋಹಣದಲ್ಲಿ ಪಾಲ್ಗೊಳ್ಳುವುದು ಮಾತ್ರವಲ್ಲ ಅದರ ಅರ್ಥವನ್ನು ಅರಿತುಕೊಳ್ಳಬೇಕು - ಎಂ ಹೆಚ್ ಮಲಾರ್
Friday, August 15, 2025
ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆ, ಕೋಟೆಪುರ ಉಳ್ಳಾಲ ಇದರ ಆಶ್ರಯದಲ್ಲಿ 79 ನೇ ಸ್ವಾತಂತ್ರ್ಯ ದ ದ್ವಜಾರೋಹಣವನ್ನು ಸಯ್ಯಿದ್ ಮದನಿ ಟ್ರಸ್ಟ್ ನ ಕೋ ಅರ್ಡಿನೇಟರ್ ಎಂ ಹೆಚ್ ಮಲಾರ್ ನೆರವೇರಿಸಿದರು
ಸ್ವಾತಂತ್ರ್ಯೋತ್ಸವದ ದ್ವಜಾರೋಹಣ ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಕೋಟೆಪುರ ಜಮಾತಿನ ಅಧ್ಯಕ್ಷರಾದ ಜನಾಬ್ ಅಬ್ಬಾಸ್ ರವರು ವಹಿಸಿದರು
ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಜೊತೆ ಕಾರ್ಯ ದರ್ಶಿ ಅಬ್ದುಲ್ ಅಝೀಝ್, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಸದಸ್ಯ ರಾದ ಹಮ್ಮಬ್ಬ, ಚಾರಿಟೇಬಲ್ ಟ್ರಸ್ಟ್ ನ ಸದಸ್ಯ ರಾದ ಕಲೀಲ್ ಹಿರಿಯ ಶಿಕ್ಷಕಿ ಎಲ್ಸಿ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಜಂಟಿ ಶಿಕ್ಷಣ ಸಂಸ್ಥೆ ಯ ಮುಖ್ಯೋಪಾಧ್ಯಾಯಿನಿ ಗೀತಾ ಡಿ ಶೆಟ್ಟಿ ಸ್ವಾಗತಿಸಿ ಸ್ವಾತಂತ್ರ್ಯ ದ ಸಂದೇಶ ನೀಡಿದರು
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು
ಚಿತ್ರಕಲಾ ಶಿಕ್ಷಕ ಬಿ.ಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು ಸಹ ಶಿಕ್ಷಕ ಅಖಿಲ್ ವಂದಿಸಿಸದರು.