ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತರಾಗಿ ಕೆ.ಎಂ.ಕೆ.ಮಂಜನಾಡಿ
Thursday, July 24, 2025
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತರಾಗಿ ಕೆಎಂ ಕೆ ಮಂಜನಾಡಿ
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಗೆ ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತರಾಗಿ ( ಕಬ್ಸ್ ) ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸೈಯದ್ ಮದನಿ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ ಎಂ ಕೆ ಮಂಜನಾಡಿ ಇವರನ್ನು ಜಿಲ್ಲಾ ಸಂಸ್ಥೆಯ ಶಿಫಾರಸಿನ ಮೇರೆಗೆ ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತರಾದ ಸನ್ಮಾನ್ಯ ಶ್ರೀ ಪಿ. ಜಿ. ಸಿಂದ್ಯಾ ರವರು ನೇಮಕ ಮಾಡಿರುತ್ತಾರೆ.
ಶ್ರೀಯುತರ ನೇಮಕದ ಆದೇಶವನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತರಾದ ಡಾಕ್ಟರ್ ಮೋಹನ್ ಆಳ್ವ ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಆಯುಕ್ತರಾದ ಪ್ರಭಾಕರ್ ಭಟ್, ಜಿಲ್ಲಾ ಕಾರ್ಯದರ್ಶಿ ಪ್ರತೀಮ್ ಕುಮಾರ್, ಜಿಲ್ಲಾ ಕಮಿಷನರ್ ಮೊಹಮ್ಮದ್ ತುಂಬೆ, ಜಿಲ್ಲಾ ಸಂಘಟನಾ ಸಹ ಆಯುಕ್ತರಾದ ಭರತ್ ಕುಮಾರ್, ಜಿಲ್ಲಾ ಸಹಕಾರ್ಯ ದರ್ಶಿ ಶ್ರೀಮತಿ ಜಯವಂತಿ ಸೋನ್ಸ್ ಉಪಸ್ಥಿತರಿದ್ದರು.