ತಂಬಾಕು ಸೇವೆನೆ ಬದುಕಿನ ಸುಂದರ ಕ್ಷಣಗಳನ್ನು ನಾಶ ಮಾಡುತ್ತದೆ - ಮಕ್ಕಳ ಕೌನ್ಸಿಲರ್ ಅಶ್ವಿನಿ ಕರೆ
Friday, June 20, 2025
ತಂಬಾಕು ಬದುಕಿನ ಸುಂದರ ಕ್ಷಣಗಳನ್ನು ನಾಶಪಡಿಸುತ್ತದೆ - ಅಶ್ವಿನಿ
ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ತಂಬಾಕು ದುಷ್ಪರಿಣಾಮಗಳ ಅರಿವು ಕಾರ್ಯಕ್ರಮ ದಲ್ಲಿ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಮಕ್ಕಳ ಕೌನ್ಸಿಲರಾದ ಶ್ರೀಮತಿ ಅಶ್ವಿನಿ ಯವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಸಂಸ್ಥೆಯ ಮುಖ್ಯಗುರುಗಳು ವಹಿಸಿದ್ದರು
ತಂಬಾಕು ದುಷ್ಪರಿಣಾಮದ ಅರಿವು ಕಾರ್ಯಕ್ರಮದ ಸಲುವಾಗಿ ನಡೆಸಿದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಿಬಂದಿ ವರ್ಗದವರು ಭಾಗವಿಹಿಸಿದರು.
ಚಿತ್ರಕಲಾ ಶಿಕ್ಷಕರಾದ ಬಿ ಎಂ ರಫೀಕ್ ತುಂಬೆ ನಿರ್ವಹಿಸಿದ ಈ ಕಾರ್ಯಕ್ರಮ ದಲ್ಲಿ ಸಹಶಿಕ್ಷಕ ಅಖಿಲ್ ರವರು ಧನ್ಯವಾದವಿತ್ತರು