-->
ಪರೀಕ್ಷೆಯ ಭಯ - ಸುಮಂಗಳ ದಿನೇಶ್ ಶೆಟ್ಟಿ ಯವರ ಕವನ

ಪರೀಕ್ಷೆಯ ಭಯ - ಸುಮಂಗಳ ದಿನೇಶ್ ಶೆಟ್ಟಿ ಯವರ ಕವನ



*ಶೀರ್ಷಿಕೆ : ಪರೀಕ್ಷೆಯ ಭಯ* 

ಯಾಕೋ ಏನೋ ಮನಸು ಮಂಕಾಗಿದೆ
ಸಾಕೋ ಸಾಕಪ್ಪ ಈ ಓದು ಎಂಬಂತಿದೆ…..//

ಕೇಕೆ ಹಾಕೋ ದ್ವನಿ ಮೌನತೆಗೆ ಜಾರಿದೆ
ಬೇಕೆ ಈ ಪರೀಕ್ಷೆ ಮನ ಗೊಣಗುತ್ತಿದೆ
ಕೈಕಾಲುಗಳು ಬೆವರಿ ತಣ್ಣಗಾದಂತಿದೆ
ಕಣ್ಣು ಮಂಜಾಗಿ ಪ್ರಶ್ನೆ ಕಾಣದಂತಾಗಿದೆ……//

 *//ಯಾಕೋ ಏನೋ………….//* 

ಭಯದ ಛಾಯೆ ಎದೆಯಲ್ಲಿ ಮೂಡಿದೆ
ಮುಗ್ಧ ನಗುವ ಮೊಗದಿಂದ ಕಸಿದಿದೆ
ತುಂಟತನವ ಬಾಳಿಂದ ದೂರ ಸರಿಸಿದೆ
ಜವಾಬ್ದಾರಿಯ ಕೂಪಕ್ಕೆ ತಳ್ಳಿದಂತಾಗಿದೆ…….//

 *//ಯಾಕೋ ಏನೋ…………//* 

ನೀರಲ್ಲಿ ನಿಂತಂತಾಗಿದೆ ಒಬ್ಬಂಟಿಯಾಗಿ
ಕೂರಲಸಾಧ್ಯವು ಕೈಕಟ್ಟಿ ಹೇಡಿಯಾಗಿ
ತೊರೆದು ಹೆದರಿಕೆಯನು ಆತ್ಮಬಲದಿ
ಸೇರಲೇಬೇಕು ಈಜಿ ದಡವ ಸ್ವಪ್ರಯತ್ನದಿ………//

 *//ಯಾಕೋ ಏನೋ…………//* 

✒️ *ಸುಮಂಗಲಾ ದಿನೇಶ್ ಶೆಟ್ಟಿ.ಕುಂಪಲ*


*ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳಿಗೆ ಶುಭವಾಗಲಿ
@@@@@@@@@@@@@

ಬಿ.ಎಂ.ರಫೀಕ್ ತುಂಬೆ
ಸಂಚಾಲಕರು
ಮಕ್ಕಳ ಜೋಳಿಗೆ


Ads on article

Advertise in articles 1

advertising articles 2

Advertise under the article