ಉಳ್ಳಾಲದ ಕೋಟೆಪುರ ಟಿಪ್ಪುಸುಲ್ತಾನ್ ಶಿಕ್ಷಣ ಸಂಸ್ಥೆಯ ಕ್ರೀಡಾ ಕೂಟ ಉದ್ಘಾಟನೆ
Thursday, January 2, 2025
*ಕೋಟೆಪುರ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾ ಕೂಟ*
ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆ, ಕೋಟೆಪುರ, ಉಳ್ಳಾಲ ಶೈಕ್ಷಣಿಕ ವರ್ಷದ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ದ ದ್ವಜಾರೋಣ ವನ್ನು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾದ ಜನಾಬ್ ಅಲ್ ಹಾಜ್ ಬಿ.ಜಿ.ಹನೀಫ್ ಹಾಜಿ ನೆರವೇರಿಸಿದರು
ಉಳ್ಳಾಲ ಆರಕ್ಷಕ ಠಾಣೆಯ ಉಪ ನಿರೀಕ್ಷಕರಾದ ಶೀತಲ್ ಕುಮಾರ್ ಅಲಗೂರು ರವರು ಪಥಸಂಚಲನಕ್ಕೆ ಹಸಿರು ನಿಶಾನೆ ತೋರಿಸಿದರು, ಸಯ್ಯಿದ್ ಮದನಿ ಚಾರಿಟಬಲ್ ಟ್ರಸ್ಟ್ ನ ಉಪಾಧ್ಯಕ್ಷ ರಾದ ಯು ಹೆಚ್ ಫಾರೂಕ್ ಧ್ವಜ ವಂದನೆ ಸ್ವೀಕರಿಸಿದರು ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ರಾದ ಅಬ್ದುಲ್ ಜಬ್ಬಾರ್ ಹಾಗೂ ಕಾರ್ಯದರ್ಶಿ ಇಮ್ತಿಯಾಜ್ ಹುಸೈನ್ ಶ್ವೇತ ವರ್ಣದ ಪಾರಿವಾಳವನ್ನು ಬಾನಂಗಳಕ್ಕೆ ಹಾರಿಸುವುದರ ಮೂಲಕ ಕ್ರೀಡಾ ಕೂಟದ ಉದ್ಘಾಟಿಸಿದರು,
ಕೋಟೆಪುರ ಜಮಾತ್ ಸದಸ್ಯರ ರಾದ ಹಮಬ್ಬ, ಉಚ್ಚಿಲಗುಡ್ಡೆ ಶಾಲೆಯ ಮುಖ್ಯಶಿಕ್ಷಕರಾದ ಹರೀಶ್ ಕುಮಾರ್, ಸಹ ಶಿಕ್ಷಕರಾದ ಚಂದ್ರಶೇಕರ್, ಉಳ್ಳಾಲ ಗುಚ್ಚ ಸಂಪನ್ಮೂಲ ವ್ಯಕ್ತಿ ಮೋಹನ ಕುಮಾರ್, ಟಿಪ್ಪು ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಾದಿಕ್, ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆಯಾದ ಸಂಗೀತಾ, ಕಲ್ಲಾಪು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ನಸೀಮಾ ಹಳೇಕೋಟೆ ಶಾಲೆಯ ಮುಖ್ಯಶಿಕ್ಣಕರಾದ ಕೆ ಎಂ ಕೆ ಮಂಜನಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಸಂಸ್ಥೆಯ ಮುಖ್ಯ ಶಿಕ್ಷಕಿ ಗೀತಾ ಡಿ ಶೆಟ್ಟಿ ಪ್ರಸ್ತಾವಿಕವಾಗಿ ಮಾತಾಡಿದರು, ಮೊಹಮ್ಮದ್ ಫಾಝಿಲ್ ರವರು ಸ್ವಾಗತಿಸಿದರು ಅಖಿಲ್ ರವರು ಧನ್ಯವಾದವಿತ್ತರು
ಬಿ.ಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು