ಸೋತವರನ್ನು ಬೆನ್ನು ತಟ್ಟಿ ಪ್ರೋತ್ಸಾಹ ನೀಡಿ - ಸೀತಾರಾಮ ಶೆಟ್ಟಿ ಅಭಿಮತ
Friday, September 13, 2024
ಅಮೃತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ತಿರುವೈಲು ವಾಮಂಜೂರು
ಇದರ ಸ್ಥಾಪಕರು ಮತ್ತು ಟ್ರಸ್ಟ್ ನ ಅಧ್ಯಕ್ಷರಾದ ಸೀತಾರಾಂ ಜೆ ಶೆಟ್ಟಿ ಯವರು
ತಿರುವೈಲು ಬದ್ರಿಯಾ ನಗರ ಮತ್ರು ಪದವು ಕ್ಲಸ್ಟರ್ ಗಳ ಪ್ರೌಢಶಾಲೆ ಯ ವಲಯ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನಾ ಸಮಾರಂಭದಲ್ಲಿ ಮಾತಾಡಿದರು
ಜಾನು ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಮತ್ತು ಎಜ್ಯುಕೇಶನಲ್ ಟ್ರಸ್ಟ್ (ರಿ) ವಾಮಂಜೂರು ಇದರ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ, ಟ್ರಸ್ಟ್ ಕೋಶಾಧಿಕಾರಿ ಜಯರಾಂ ಶೆಟ್ಟಿ, ಸಂಸ್ಥೆಯ ಆಡಳಿತಾಧಿಕಾರಿ ಕೆ ವಿ ಶೆಟ್ಟಿ, ಸ್ಥಳೀಯ ಕಾಪೋರೇಟರ್ ಹೇಮಲತಾ ರಘು ಸಾಲ್ಯಾನ್,
ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಸುಷ್ಮಾ ,ಪ್ರೌಡ ಶಾಲಾ ಸಹಶಿಕ್ಷಕ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಕ್೯ ಜೆ ಮೆಂಡೋನ್ಸ, ಸಿಆರ್ ಪಿ ಗಳಾದ ಶೀಲಾವತಿ, ಪುಷ್ಪಾವತಿ, ಕುಮುದಿನಿ ಬಿಆರ್ ಪಿ ಸವಿತಾ, ಶಿಕ್ಷಣ ಸಂಯೋಜಕ ರಾದ ವಿಶ್ವ ನಾಥ್, ಪ್ರೌಡಶಾಲಾ ಸಹಶಿಕ್ಷಕ ಸಂಘದ ವೀಣಾ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ ಎಂ ರಫೀಕ್ ತುಂಬೆ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ್ ರವರು ಉಪಸ್ಥಿತರಿದ್ದರು
ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಅನ್ನಪೂರ್ಣ ರವರು ಪ್ರಾಸ್ತಾವಿಕ ಮಾತಾಡಿದರು ಶಾಲಾ ಮುಖ್ಯ ಶಿಕ್ಷಕಿ ಪುಷ್ಪ ರವರು ಸ್ವಾಗತ ನೀಡಿದರು
ಸಹಶಿಕ್ಷಕಿ ಪ್ರೇಮಲತಾ ವಂದಿಸಿದರು ಶಿಕ್ಷಕಿ ಭಾರತಿ ಯವರು ಕಾರ್ಯಕ್ರಮ ನಿರೂಪಿಸಿದರು