ಸ್ಕೌಟ್ ಮತ್ತು ಗೈಡ್ ತರಬೇತಿ ಯಿಂದ ಜೀವನ ಶಿಕ್ಷಣ ವೃದ್ದಿ - ಜಿಲ್ಲಾ ಸ್ಕೌಟ್ ಆಯುಕ್ತರು ಬಿ.ಮೊಹಮ್ಮದ್ ತುಂಬೆ
Friday, August 2, 2024
ಸ್ಕೌಟ್ ಮತ್ತು ಗೈಡ್ ತರಬೇತಿಯಿಂದ ಜೀವನ ಶಿಕ್ಷಣ ವೃದ್ಧಿ : ಜಿಲ್ಲಾ ಸ್ಕೌಟ್ ಆಯುಕ್ತರು ಬಿ.ಮೊಹಮ್ಮದ್ ತುಂಬೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ,ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಮೂಡಬಿದಿರೆ ಸ್ಥಳೀಯ ಸಂಸ್ಥೆಯ ವತಿಯಿಂದ ದಿನಾಂಕ 02-08-2024 ರಿಂದ 08-08-2024 ರವರೆಗೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನ ಸ್ವರಾಜ್ಯ ಮೈದಾನ ಮೂಡಬಿದಿರೆಯಲ್ಲಿ ಕಬ್ ಮಾಸ್ಟರ್, ಫ್ಲಾಕ್ ಲೀಡರ್, ಸ್ಕೌಟ್ ಮಾಸ್ಟರ್,ಗೈಡ್ ಕ್ಯಾಪ್ಟನ್,ರೋವರ್ ಸ್ಕೌಟ್ ಲೀಡರ್ ಮತ್ತು ರೇಂಜರ್ ಲೀಡರ್ ಗಳ ಪ್ರಾಥಮಿಕ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಜಿಲ್ಲಾ ಸ್ಕೌಟ್ ಆಯುಕ್ತರಾದ ಶ್ರೀ ಬಿ.ಮೊಹಮ್ಮದ್ ತುಂಬೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಪ್ರತೀಮ್ ಕುಮಾರ್,ಜಿಲ್ಲಾ ಕೋಶಾಧಿಕಾರಿ ಶ್ರೀ ನವೀನ್ ಚಂದ್ರ ಅಂಬೂರಿ,ಜಿಲ್ಲಾ ಗೈಡ್ ತರಬೇತಿ ಆಯುಕ್ತೆ ಶ್ರೀಮತಿ ಜಯಶ್ರೀ,ಸ್ಕೌಟ್ ವಿಭಾಗದ ಶಿಬಿರ ನಾಯಕರಾದ ಶ್ರೀ ಗುರುಮೂರ್ತಿ LT (S),ಗೈಡ್ ವಿಭಾಗದ ಶಿಬಿರ ನಾಯಕಿಯಾದ ಶ್ರೀಮತಿ ಪ್ರೇಮಲತಾ ALT (G), ಬುಲ್ ಬುಲ್ ವಿಭಾಗದ ನಾಯಕಿಯಾದ ಶ್ರೀಮತಿ ಸಂಧ್ಯಾ ಶೆಣೈ ALT (F),ಶಿಬಿರ ಸಹಾಯಕರಾದ ಶ್ರೀಮತಿ ನಯನ Pre ALT (G),ಶ್ರೀಮತಿ ಸಂಧ್ಯಾ HWB (G), ಶ್ರೀಮತಿ ಪೂರ್ಣಿಮಾ,ಕಬ್ ವಿಭಾಗದ ಸಹಾಯಕರಾಗಿ ಶ್ರೀ ಪ್ರಸಾದ್ HWB (C),ಕು.ಕವಿತಾ HWB(C), ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀ ಭರತ್ ರಾಜ್ ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಕಬ್ ವಿಭಾಗ 06,ಬುಲ್ ಬುಲ್ ವಿಭಾಗ 07,ಸ್ಕೌಟ್ ವಿಭಾಗ 33,ಗೈಡ್ ವಿಭಾಗ 32,ರೋವರ್ ವಿಭಾಗ 09,ರೇಂಜರ್ ವಿಭಾಗ 11 ಒಟ್ಟು 98 ಶಿಬಿರಾರ್ಥಿಗಳು ಭಾಗವಹಿಸಿದರು.