ಉಳ್ಳಾಲ : ಸಯ್ಯಿದ್ ಮದನಿ ವಿದ್ಯಾ ಸಂಸ್ಥೆ ಹಳೆಕೋಟೆಯಲ್ಲಿ 450 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ
Wednesday, August 14, 2024
ಹಳೆಕೋಟೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ
********************
ಉಳ್ಳಾಲ: ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯ 450 ವಿದ್ಯಾರ್ಥಿಗಳಿಗೆ ಬುಧವಾರ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ದಾನಿಗಳಾದ ಹಳೆವಿದ್ಯಾರ್ಥಿ ಇಮ್ತಿಯಾಝ್, ಯು.ಬಿ.ಮಹಮ್ಮದ್, ಡಾ.ಸಿ.ಪಿ.ಅಬ್ದುಲ್ಲಾ ಯಾಸರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ಮಂಗಳೂರು ದೈಹಿಕ ಶಿಕ್ಷಣಾಧಿಕಾರಿ ಲಿಲ್ಲಿ ಪಾಯ್ಸ್ ಅವರನ್ನು ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಿಕ್ಷಣ ಪ್ರೇಮಿ
ಯು.ಬಿ. ಮಹಮ್ಮದ್ ಮಾತನಾಡಿ,
ಜೀವನ ಎಷ್ಟು ದಿನ ಎನ್ನುವುದು ಯಾರಿಗೂ ಗೊತ್ತಿಲ್ಲ, ವಯನಾಡಿನಲ್ಲಿ ರಾತ್ರಿ ನಡೆದ ದುರಂತ ಪ್ರತಿಯೊಬ್ಬರಿಗೆ ಪಾಠ. ನಾವು ನಮ್ಮ ಜೀವನದ ಅವಧಿಯಲ್ಲಿ ಮಾಡುವ ಕೆಲಸ ಜನರ ಮನದಲ್ಲಿ ಸದಾ ನೆನಪಿನಲ್ಲಿ ಇರುವಂತಿರಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇತರರಿಗೆ ಸಹಾಯ ಮಾಡುವ ಗುಣ ಹೊಂದಿರಬೇಕು, ಹೆತ್ತವರು ಕಂಡ ಕನಸು ನನಸಾಗಿಸುವ ನಿಟ್ಟಿನಲ್ಲಿ ಸಮಯ ವ್ಯರ್ಥಮಾಡದೆ ಪರಿಶ್ರಮಪಟ್ಟು ಓದಿ ಉತ್ತಮ ಅಂಕ ಗಳಿಸಬೇಕು ಎಂದರು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಫಾರೂಕ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು. ಹಳೆಕೋಟೆ ಮಸೀದಿಯ ಅಧ್ಯಕ್ಷ ಮಹಮ್ಮದ್, ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಸಮಾಜ ಸೇವಕರಾದ ಮಹಮ್ಮದ್ ಹನೀಫ್, ಮಹಮ್ಮದ್ ಅಶ್ರಫ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ಎಚ್.ಇಬ್ರಾಹಿಂ, ಸದಸ್ಯರಾದ ಯು.ಕೆ.ಬಾವ, ಅಲ್ತಾಫ್ ಯು.ಎಚ್., ಎಂ.ಎಚ್.ಇಬ್ರಾಹಿಂ, ಕೋಶಾಧಿಕಾರಿ ಕರೀಂ ಹಳೆಕೋಟೆ, ಅರೆಬಿಕ್ ಟ್ರಸ್ಟ್ ಸದಸ್ಯ ಅಶ್ರಫ್
ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕ ಕೆಎಂಕೆ ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶಕೀಲಾ ವಂದಿಸಿದರು.