ಪ್ರತಿಯೊಬ್ಬರ ಬಾಲ್ಯ ತಿರುಗಿ ಬರಲಾರದು. ನಮ್ಮ ಮಕ್ಕಳಿಗೆ ಸ್ಕೌಟ್ ಗೈಡ್ ಮೂಲಕ ಉತ್ತಮ ಬಾಲ್ಯವನ್ನು ನೀಡೋಣ...ಜಿಲ್ಲಾ ಸ್ಕೌಟ್ ಆಯುಕ್ತ ಬಿ.ಎಂ.ತುಂಬೆ
Thursday, July 25, 2024
ಮಂಗಳೂರು ದಕ್ಷಿಣ ನಗರ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆ ಮತ್ತು ಮಾಹಿತಿ ಕಾರ್ಯಾಗಾರ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಗಳೂರು ದಕ್ಷಿಣ ನಗರ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆ ಮತ್ತು ಮಾಹಿತಿ ಕಾರ್ಯಾಗಾರ ದಿನಾಂಕ 25-07-2024 ರಂದು ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಲಾಲ್ ಬಾಗ್ ಮಂಗಳೂರಿನಲ್ಲಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಸಂತ್ ರಾವ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣ ವಲಯದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎಚ್ ಆರ್ ಈಶ್ವರ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ,ಶ್ರೀಮತಿ ಶುಭ ವಿಶ್ವನಾಥ್,ಶ್ರೀಮತಿ ಸುಫಲ,ಜಿಲ್ಲಾ ಸ್ಕೌಟ್ ಆಯುಕ್ತರಾದ ಶ್ರೀ ಬಿ ಎಂ ತುಂಬೆ,ಜಿಲ್ಲಾ ಗೈಡ್ ಆಯುಕ್ತೆ(ಹೆಚ್ಚುವರಿ) ಶ್ರೀಮತಿ ಫೆಲ್ಸಿ ಫರ್ನಾಂಡಿಸ್,ಜಿಲ್ಲಾ ಕಾರ್ಯದರ್ಶಿ ಶ್ರೀ ಪ್ರತೀಮ್ ಕುಮಾರ್,ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀ ಭರತ್ ರಾಜ್ ಕೆ,ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಹರ್ಷಕುಮಾರ್ ಕೆದಿಗೆ,ಜಿಲ್ಲಾ ಸಹಾಯಕ ಆಯುಕ್ತರಾದ ಶ್ರೀ ಭಾಸ್ಕರ್ ರಾವ್ ರವರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ 2023-24 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸ್ಕೌಟ್ಸ್ ಗೈಡ್ಸ್ ಮಕ್ಕಳಿಗೆ ಹಾಗೂ ಅಂತರರಾಷ್ಟ್ರೀಯ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸ್ಕೌಟ್ ವಿದ್ಯಾರ್ಥಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.ಹಾಗೇ ಮಂಗಳೂರು ದಕ್ಷಿಣ ನಗರ ಸ್ಥಳೀಯ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ ಜಿಲ್ಲಾ ಸಹಾಯಕ ಆಯುಕ್ತರಾದ ಶ್ರೀಮತಿ ಆಶಾ ಶೆಟ್ಟಿ ಮತ್ತು ಶ್ರೀ ಶಿಫಲ್ ರವರನ್ನು ಸ್ಕಾರ್ಫ್ ತೊಡಿಸಿ ಸ್ವಾಗತಿಸಲಾಯಿತು.
*2023-24 ನೇ ಸಾಲಿನ ವಾರ್ಷಿಕ ವರದಿ ಮತ್ತು 2024-25 ನೇ ಸಾಲಿನ ಯೋಜಿತ ಕಾರ್ಯಕ್ರಮದ ಪಟ್ಟಿಯನ್ನು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ನಾರಾಯಣ ಶೇರಿಗಾರ್ ರವರು ವಾಚಿಸಿದರು.ಶ್ರೀಮತಿ ಸಂಧ್ಯಾ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿಯವರು 2023-24 ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರದ ಆಯ ವ್ಯಯವನ್ನು ಮಂಡಿಸಿದರು.*
*ಮಂಗಳೂರು ದಕ್ಷಿಣ ನಗರ ಸ್ಥಳೀಯ ಸಂಸ್ಥೆಗೆ ನೂತನ ಕಾರ್ಯದರ್ಶಿಯಾಗಿ ಶ್ರೀಮತಿ ಪ್ರೀತಿ ಲೋಬೊರವರು ಆಯ್ಕೆ ಮಾಡಲಾಯಿತು.*
*ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಯ ವಿವಿಧ ಶಾಲಾ/ಕಾಲೇಜಿನಿಂದ ದಳ ನಾಯಕರುಗಳು ಭಾಗವಹಿಸಿದರು.*
*ಶ್ರೀಮತಿ ಸಂಧ್ಯಾ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿರವರು ಸ್ವಾಗತಿಸಿದರು,ಶ್ರೀಮತಿ ಆರತಿ ಗೈಡ್ ಪ್ರತಿನಿಧಿರವರು ವಂದನಾರ್ಪಣೆಗೈದರು,ಸ್ಥಳೀಯ ಸಂಸ್ಥೆಯ ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಲೋಬೊರವರು ಕಾರ್ಯಕ್ರಮವನ್ನು ನಿರೂಪಿಸಿದರು.*