ಉಳ್ಳಾಲ ಟಿಪ್ಪು ಸುಲ್ತಾನ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ರಹಿಮಾನ್ ರಿಗೆ ಆತ್ಮೀಯ ವಿದಾಯ
Saturday, July 6, 2024
ಟಿಪ್ಪು ಸುಲ್ತಾನ್ ಕಾಲೇಜಿನಲ್ಲಿ ಟಿಪ್ಪು ಕಳೆದ 23 ವರ್ಷಗಳಿಂದ ದೀರ್ಘ ಸೇವೆ ಸಲ್ಲಿಸಿ ರಾಜೀನಾಮೆಯನ್ನು ನೀಡಿ ತೆರಳಿರುವ ಪ್ರಾಂಶುಪಾಲ ಅಬ್ದುಲ್ ರಹೀಮ್ ರವರನ್ನು ಸಮಚ ದ ವತಿಯಿಂದ ಗೌರವ ಪೂರಕವಾಗಿ ಬೀಳ್ಕೊಡಲಾಯಿತು
ಸಮಚದ ಗೌರವ ಅಧ್ಯಕ್ಷರಾದ ಹಾಜಿ ಎಂ ಹೆಚ್ ಮಲಾರ್ ರವರು ಶಾಲು ಹೊದಿಸಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು
ಈ ಸಂದರ್ಭದಲ್ಲಿ ಸಮಚದ ಉಪಾಧ್ಯಕ್ಷರಾದ ಶ್ರೀಮತಿ ನಸೀಮಾ, ಕೋಶಾಧಿಕಾರಿಯಾದ ಶ್ರೀಮತಿ ಸಂಗೀತ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಪವಿತ್ರ, ಇಮ್ತಿಯಾಜ್ ಮತ್ತು ಶ್ರೀಮತಿ ರಮ್ಲತ್ ಬಾನು ಹಾಗೂ ಶ್ರೀಮತಿ ಗೀತಾ ಡಿ ಶೆಟ್ಟಿ ಉಪಸ್ಥಿತರಿದ್ದರು.
ಸಮಚ ದ ಅಧ್ಯಕ್ಷರಾದ ಕೆ ಎಮ್ ಕೆ ಮಂಜ ನಾಡಿ ಸ್ವಾಗತಿಸಿದ ಈ ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ರಸುಲ್ ಖಾನ್ ರವರು ಧನ್ಯವಾದವಿತ್ತರು.