ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ ಮತ್ತು ಗೈಡ್ ಇದರ ನೂತನ ಆಯುಕ್ತರು ಗಳಾದ ಬಿ. ಮೊಹಮ್ಮದ್ ತುಂಬೆ ಮತ್ತು ವಿಮಲಾ ರಂಗಯ್ಯ ರಿಗೆ ಸನ್ನದು ಪ್ರಮಾಣ ಪತ್ರ ದ ಗೌರವ
Wednesday, July 3, 2024
ದಿನಾಂಕ 03/07/2024 ರಂದು ಮೂಡಬಿದ್ರೆಯಲ್ಲಿ ನಡೆದ ಶಿಕ್ಷಣ ಇಲಾಖೆ ಅಧಿಕಾರಿಗಳ ಮತ್ತು ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳ ಸಮಾಲೋಚನಾ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂತನವಾಗಿ ಜಿಲ್ಲಾ ಸ್ಕೌಟ್ ಆಯುಕ್ತರಾಗಿ ಆಯ್ಕೆಯಾಗಿರುವ ಶ್ರೀ ಬಿ.ಎಂ.ತುಂಬೆ ಹಾಗೂ ಜಿಲ್ಲಾ ಗೈಡ್ ಆಯುಕ್ತೆಯಾಗಿ ಆಯ್ಕೆಯಾಗಿರುವ ಶ್ರೀಮತಿ ವಿಮಲಾ ರಂಗಯ್ಯ ಇವರಿಗೆ ರಾಜ್ಯ ಸಂಸ್ಥೆಯಿಂದ ಸನ್ನದು (ವಾರೆಂಟ್)ಪ್ರಮಾಣಪತ್ರವನ್ನು ಮಾನ್ಯ ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಪಿ. ಜಿ. ಆರ್ ಸಿಂದ್ಯಾ ರವರು ನೀಡಿ ಗೌರವಿಸಿದರು
ನಿಮ್ಮಿಬ್ಬರ ಅವಧಿಯಲ್ಲಿ ಸ್ಕೌಟ್ ಮತ್ತು ಗೈಡ್ ಲ್ಲಿ ಹೆಚ್ಚಿನ ಕಾರ್ಯಕ್ರಮ ಗಳು ಮೂಡಿ ಬರಲಿ
ಅಭಿನಂದನೆಗಳು
ಮಕ್ಕಳ ಜೋಳಿಗೆ
www.makkalajolige.com